Breaking News

ವೆಂಕಟರಾಯ ರಸ್ತೆ ಹೆಸರು ಟಿಪ್ಪುಸುಲ್ತಾನ್ ಅರಮನೆ ರಸ್ತೆ ಎಂದು ಬದಲಾಗದು ಮೇಯರ್ ಸ್ಪಷ್ಟನೆ


ಬೆಂಗಳೂರು : ನಗರದ ಚಾಮರಾಜಪೇಟೆ 1ನೇ ಮುಖ್ಯ ರಸ್ತೆ ಮೂಲಕ ಮೈಸೂರು ರಸ್ತೆಗೆ ಸೇರುವ ಮುಖ್ಯ ರಸ್ತೆಗೆ ಹಾಲಿ ಇರುವ ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯ ರಸ್ತೆ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ ಎಂದು ಮೇಯರ್ ಜಿ. ಪದ್ಮಾವತಿ ಸ್ಪಷ್ಟಪಡಿಸಿದ್ದಾರೆ.

ಇತಿಹಾಸ ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಅವರ ನೇತೃತ್ವದ ನಿಯೋಗ ಇಂದು ಮೇಯರ್ ಅವರನ್ನು ಭೇಟಿ ಮಾಡಿ ಆಲೂರು ವೆಂಕಟರಾಯ ರಸ್ತೆಯ ಹೆಸರನ್ನು ಬದಲಿಸಿ ಟಿಪ್ಪುಸುಲ್ತಾನ್ ಅರಮನೆ ರಸ್ತೆ ಎಂದು ಮರು ನಾಮಕರಣ ಮಾಡಬಾರದು ಎಂಬ ಮನವಿಗೆ ಸ್ಪಂದಿಸಿದ ಮೇಯರ್, ಈ ರಸ್ತೆಗೆ ಆಲೂರು ವೆಂಕಟರಾಯ ರಸ್ತೆ ಎಂಬ ಹೆಸರನ್ನೇ ಉಳಿಸಿಕೊಳ್ಳಲಾಗುವುದು ಎಂದು ಹೇಳಿದರು.

ಕೌನ್ಸಿಲ್ ಸಭೆಯಲ್ಲಿ ಈ ನಿರ್ಣಯ ಕೈತಪ್ಪಿ ಬಂದಿದೆ. ಹಾಗಾಗಿ ನಿರ್ಣಯದ ಪಟ್ಟಿಯಲ್ಲಿ ಈ ವಿಷಯ ಪ್ರಸ್ತಾಪವಾಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.

ಆಲೂರು ವೆಂಕಟರಾಯ ಅವರು ಕನ್ನಡಕ್ಕಾಗಿ ದೊಡ್ಡ ಮಟ್ಟದ ಹೋರಾಟವನ್ನೇ ನಡೆಸಿದ್ದಾರೆ. ಅವರ ಹೆಸರನ್ನು ತೆಗೆದು ಮರು ನಾಮಕರಣ ಮಾಡುವುದು ಸರಿಯಲ್ಲ ಎಂದು  ಮೇಯರ್ ಹೇಳಿದರು.
-sanjevani

loading...

No comments