Breaking News

"ಚಪ್ಪಲ್ ಹೇಳಿಕೆ " ನನ್ನ ಬಾಯಿಂದ ಆ ಮಾತು ಬರಬಾರದಿತ್ತು : ಖಾದರ್ಮಂಗಳೂರು  : ಕೇರಳ ಮುಖ್ಯ ಮಂತ್ರಿ ಭೇಟಿ ಸಮಯದಲ್ಲಿ ಆಹಾರ ಸಚಿವ ಯುಟಿ ಖಾದರ್ ಬಂದ್ ಗೆ ಕರೆಕೊಟ್ಟಿರುವವರಿಗೆ ಚಪ್ಪಲಿ ಏಟು ನೀಡಬೇಕು ಎಂದು ಹೇಳಿದ್ದರು.ಸಚಿವರ ಹೇಳಿಕೆಗೆ ಜಿಲ್ಲೆಯಲ್ಲಿ  ಭಾರೀ ಆಕ್ರೋಶ ವ್ಯಕ್ತವಾಗಿತ್ತು .ಇಂದು ಮಧ್ಯಾಹ್ನ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಸಚಿವರು ತಾವು ಫೆ.೨೫ರಂದು ಕರೆಯಲಾದ ದ.ಕ. ಜಿಲ್ಲಾ ಬಂದ್ ಉದ್ದೇಶಿಸಿ ಮಾತಾಡಿರುವ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದರು.  ನನ್ನ ಬಾಯಿಂದ ಆ ಮಾತು ಬರಬಾರದಿತ್ತು. ಆದರೆ ಕೆಲವರು ಇದನ್ನೇ ರಾಜಕೀಯವಾಗಿ ಬಳಸುತ್ತಿದ್ದಾರೆ. ಯಾರಿಗೂ ನೋವುಂಟು ಮಾಡಲು ನಾನೂ ಅಂಥ ಹೇಳಿಕೆ ನೀಡಿಲ್ಲ’ ಎಂದು ಖಾದರ್ ಹೇಳಿದ್ದಾರೆ.

‘ನೆರೆಯ ರಾಜ್ಯದ ಮುಖ್ಯಮಂತ್ರಿ ಬಂದಾಗ ಸತ್ಕರಿಸುವ ಬದಲು ಸಂವಿಧಾನ ಮೀರಿ ನಿಂತು ಬಂದ್ ಮಾಡೋದು ಸರಿಯಲ್ಲ. ಇದು ಜಾನಪದ ನುಡಿಮತ್ತಿನ ಪ್ರಕಾರ ನಡೆದ ಮಾತು. ಇದಕ್ಕೆ ನನ್ನ ಎಲ್ಲಾ ಹಿತೈಷಿಗಳಿಂದ ವಿರೋಧ ವ್ಯಕ್ತವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ನಾಲ್ಕು ವರ್ಷಗಳ ಅವಧಿಯಲ್ಲಿ ಯಶಸ್ವಿ ಆಡಳಿತ ನಡೆಸಿದ್ದಾರೆ. ಬಿಜೆಪಿ ನಾಯಕರು ತಮ್ಮೊಳಗಿನ ಗೊಂದಲಗಳನ್ನು ಬಗೆಹರಿಸಲು ಕಾಂಗ್ರೆಸ್ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆ’ ಎಂದು ಖಾದರ್ ಹೇಳಿದರು.
loading...

No comments