Breaking News

ಒಬ್ಬಂಟಿ ಯುವತಿಗೆ ಅಣ್ಣನ ಸ್ಥಾನದಲ್ಲಿ ನಿಂತು ಅಭಯ ನೀಡಿದ ಅಣ್ಣಾಮಲೈ


ಚಿಕ್ಕಮಗಳೂರು: ತಾಯಿಯನ್ನು ಕಳೆದುಕೊಂಡು ಅಕ್ಕನೊಂದಿಗೆ ವಾಸಿಸುತ್ತಿದ್ದ ಯುವತಿ ಇದೀಗ ಅಕ್ಕನೂ ಪ್ರೀತಿಸಿದವನ ಜೊತೆ ವಿವಾಹವಾಗಿ ಹೊರಟು ನಿಂತಾಗ ತನ್ನನ್ನು ಒಬ್ಬಂಟಿ ಮಾಡಿ ಹೋಗದಂತೆ ಗೋಗರೆದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. 
ಯುವತಿಯ ಅಕ್ಕ ಮನೆಯವರ ವಿರೋಧದ ನಡುವೆಯೂ ಪ್ರೇಮವಿವಾಹವಾಗಲು ಹೊರಟಿದ್ದಳು.ಆದ್ದರಿಂದ ಪ್ರಕರಣ ಎಸ್ಪಿ ಕಛೇರಿ ಮೆಟ್ಟಿಲೇರಿತ್ತು , ಆದರೆ ಜೋಡಿಗಳಿಬ್ಬರು ಪ್ರಾಪ್ತ ವಯಸ್ಕರಾದ ಕಾರಣ ಪೋಲೀಸ್ ವರಿಷ್ಟಾಧಿಕಾರಿ ಕಾನೂನು ಮೀರಿ ಮದುವೆ ತಡೆಯುವ ಹಾಗೆ ಇರಲಿಲ್ಲ. ಆದರೆ ಇತ್ತ ತಂಗಿ ಅಕ್ಕನಲ್ಲಿ ತನ್ನನ್ನು ಬಿಟ್ಟು ಹೋಗದಂತೆ ಗೋಗರೆಯುತ್ತಿದ್ದಳು. 

ತಾನು ಧರಿಸುವ ಪ್ರತಿಯೊಂದು ವಸ್ತುಗಳು ನೀನು ಕೊಡಿಸಿರೋದು, ಈಗ ನೀನೇ ನನ್ನನ್ನು ತೊರೆದು ಹೋದರೆ ನನ್ನ ವಿದ್ಯಾಭ್ಯಾಸದ ಗತಿ ಏನು ಎಂದು ಅಕ್ಕನ ಮನವೊಲಿಸುವ ಪ್ರಯತ್ನ ಮಾಡಿದರೂ ಅಕ್ಕನ ಮನಸ್ಸು ಕರಗಲಿಲ್ಲ.

ಕೊನೆಗೆ ಎಸ್ಪಿ ಅಣ್ಣಾ ಮಲೈ ಯುವತಿಯನ್ನು ಸಮಾಧಾನ ಮಾಡಿ, ನಿನ್ನ ಅಕ್ಕ ಪ್ರೀತಿಸಿ ಮದುವೆಯಾದ ಕಾರಣ ನೀನು ಒಬ್ಬಂಟಿಯಾದೆ ಎಂದು ತಿಳಿಯಬೇಡ, ನಿನ್ನ ವಿದ್ಯಾಭ್ಯಾಸ ಪೂರ್ಣವಾಗುವವರೆಗೆ ನಿನ್ನ ಪ್ರತಿಯೊಂದು ಖರ್ಚನ್ನು ನಾನು ನೋಡಿಕೊಳ್ಳುತ್ತೇನೆ. ವಿದ್ಯಾಭ್ಯಾಸ ಮುಗಿದ ನಂತರ ನಿನ್ನನ್ನು ಕೆಲಸಕ್ಕೆ ಸೇರಿಸುವ ಜವಾಬ್ದಾರಿ ನನ್ನದು, ಅಮೇಲೆ ನಿನ್ನ ದಾರಿ ನೀನು ನೋಡಿಕೊಳ್ಳಬೇಕು ಎಂದರು.

ಇತ್ತ ಅಣ್ಣಾಮಲೈ ಮಾತು ಕೇಳಿ ನೆರಿದಿದ್ದ ಪತ್ರಕರ್ತರು, ಯುವತಿಯ ಕುಟುಂಬಸ್ತರು ಮತ್ತು ಪೋಲೀಸರ ಕಣ್ಣಲ್ಲೂ ನೀರಾಡಿತ್ತು.ಸಿಂಗಂ ಎಂದು ಕರೆಸಿಕೊಳ್ಳುವ ಎಸ್ಪಿ ಅಣ್ಣಾ ಮಲೈ ಯುವತಿಗೆ ಅಣ್ಣನ ಸ್ಥಾನದಲ್ಲಿ ನಿಂತು ಮಾನವೀಯತೆಯಿಂದ ತೆಗೆದುಕೊಂಡ ನಿರ್ಧಾರಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರ ಹರಿದುಬರುತ್ತಿದೆ.


loading...

No comments