Breaking News

ವಿಟ್ಲ ಬಜರಂಗ ದಳ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾರಾಮಾರಿ


ವಿಟ್ಲ : ಬಜರಂಗ ದಳ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಹೊಗೆಯಾಡುತ್ತಿದ್ದ ಧ್ವೇಷ ಸ್ಫೋಟಗೊಂಡ ಪರಿಣಾಮ ಬಜರಂಗದಳ ಕಾರ್ಯಕರ್ತರಿಬ್ಬರ ಮೇಲೆ ಬಿಜೆಪಿ ಕಾರ್ಯಕರ್ತರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಶನಿವಾರ ತಡರಾತ್ರಿ ಸಾಲೆತ್ತೂರಿನಲ್ಲಿ ನಡೆದಿದೆ.

ಸಾಲೆತ್ತೂರು ದೇವಸ್ಥಾನ ರಸ್ತೆಯಲ್ಲಿ ಕೆಲ ಸಮಯಗಳ ಹಿಂದಷ್ಟೆ ಆರಂಭಗೊಂಡಿದ್ದ ವಿಕ್ಕಿ ವೈನ್ ಶಾಪ್ ವಠಾರದಲ್ಲಿ ಬಜರಂಗ ದಳ ಕಾರ್ಯಕರ್ತ ಬರ್ಕಳ ಪುಷ್ಪರಾಜ್ (27) ಮತ್ತು ಲಕ್ಷ್ಮೀಕೋಡಿ ಶ್ರೀಕಾಂತ್ (25) ಎಂಬಿಬ್ಬರ ಮೇಲೆ ಹಲ್ಲೆ ನಡೆದಿದೆ.


ಹಲ್ಲೆಗೊಳಗಾದ ಪುಷ್ಪರಾಜ್ ಮತ್ತು ಶ್ರೀಕಾಂತ್
ಶನಿವಾರ ರಾತ್ರಿ 11.20ರ ಸುಮಾರಿಗೆ ಪುಷ್ಪರಾಜ್ ಮತ್ತು ಶ್ರೀಕಾಂತ್ ತಮ್ಮ ಸ್ನೇಹಿತರೊಂದಿಗೆ ನಿಂತಿದ್ದಾಗ ಆರು ಜನರ ತಂಡವೊಂದು ಅವಾಚ್ಯವಾಗಿ ನಿಂದಿಸುತ್ತಾ ಸೋಡಾ ಬಾಟಲಿ, ರಾಡ್ ಮತ್ತು ಕಲ್ಲುಗಳಿಂದ ಏಕಾಏಕಿ ಹಲ್ಲೆ ನಡೆಸಿತ್ತೆಂದು ಗಾಯಾಳುಗಳು ತಿಳಿಸಿದ್ದಾರೆ.

ಕಿಲ್ಲಂಬರೆಪಡ್ಪು ವರುಣ್ (24), ಪಾಲ್ತಾಜೆ ಜಯಂತ (24), ಕೂಡುರಸ್ತೆ ಸ್ವಾಗತ್ (22), ಅಗರಿ ಲೋಹಿತ್ (27), ಕಾರಾಜೆ ಅಶ್ವಥ್ (25) ಮತ್ತು ಕಾರಾಜೆ ಪುಷ್ಪರಾಜ್ (23) ಹಲ್ಲೆ ನಡೆಸಿದ ಆರೋಪಿಗಳೆಂದು ಗಾಯಾಳುಗಳು ತಿಳಿಸಿದ್ದಾರೆ. ಆರೋಪಿಗಳೆಲ್ಲರೂ ಸ್ಥಳೀಯ ಬಿಜೆಪಿ ಕಾರ್ಯಕರ್ತರಾಗಿದ್ದು, ವೈನ್ ಶಾಪ್ ಮಾಲಿಕರ ಕುಮ್ಮಕ್ಕಿನಿಂದಲೇ ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ.


loading...

No comments