ಬಿಎಸ್ ವೈ ಭೇಟಿಯಾಗದ ಕೃಷ್ಣ
ಬೆಂಗಳೂರು : ಇತ್ತೀಚೆಗೆ ಕಾಂಗ್ರೆಸ್ ಪಕ್ಷ ತ್ಯಜಿಸಿದ ವಯೋವೃದ್ಧ ಎಸ್ ಎಂ ಕೃಷ್ಣ ಬಿಜೆಪಿ ಸೇರಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡ್ಡಿಯೂರಪ್ಪ ಶನಿವಾರ ಕಲಬುರ್ಗಿಯಲ್ಲಿ ಘೋಷಿಸಿದ ನಂತರದ ಬೆಳವಣಿಗೆಯಲ್ಲಿ ಭಾನುವಾರದಂದು ಇಬ್ಬರು ನಾಯಕರೂ ಭೇಟಿಯಾಗುವರೆಂದು ನಿರೀಕ್ಷಿಸಲಾಗಿತ್ತಾದರೂ ಇದು ನೆರವೇರಿಲ್ಲ.
ಯಾವುದೇ ಅವಸರದ ನಿರ್ಧಾರ ಕೈಗೊಳ್ಳದೇ ಇರಲು ಕೃಷ್ಣ ತೀರ್ಮಾನಿಸಿದ್ದಾರೆನ್ನಲಾಗಿದ್ದು ಮಾರ್ಚ್ 11ರಂದು ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶಗಳು ಹೊರಬೀಳುವ ತನಕ ಕಾದು ನಂತರ ತನ್ನ ಮುಂದಿನ ನಡೆಯ ಬಗ್ಗೆ ನಿರ್ಧರಿಸಲಿದ್ದಾರೆಂದು ತಿಳಿದು ಬಂದಿದೆ.
“ತಾನು ಕೃಷ್ಣ ಅವರನ್ನು ಭೇಟಿಯಾಗಲಿದ್ದೇನೆಂದು ಯಡ್ಡಿಯೂರಪ್ಪ ಹೇಳಿದ್ದರೂ ಅವರಿಬ್ಬರ ಭೇಟಿ ಸಾಧ್ಯವಾಗಿಲ್ಲ. ಕೃಷ್ಣ ಅವರು ರಾಜ್ಯ ಬಿಜೆಪಿ ನಾಯಕರನ್ನು ಭೇಟಿಯಾಗಲು ಆಸಕ್ತಿ ವಹಿಸಿಲ್ಲ” ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಒಂದು ವೇಳೆ ಕೃಷ್ಣ ಅವರು ಬಿಜೆಪಿ ಸೇರಲು ಮನಸ್ಸು ಮಾಡಿದರೂ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಹಾಗೆ ಮಾಡಬಹುದು ಎಂಬುದು ಇತ್ತೀಚಿಗಿನ ಬೆಳವಣಿಗೆಯಿಂದ ಸ್ಪಷ್ಟವಾಗಿದೆ.
-k ale
loading...
No comments