Breaking News

ಅಪಘಾತಕ್ಕೊಳಗಾಗಿ ಸಾಯುತ್ತಿದ್ದವನ ಫೋಟೋ ತೆಗೆದ ಮತಿಗೆಟ್ಟ ಜನ


ಕೊಪ್ಪಳ- ರಸ್ತೆ ಅಪಘಾತಕ್ಕೆ ಒಳಗಾಗಿ   ಸಾಯುತ್ತಾ ಬಿದ್ದಿದ್ದ ಯುವಕನೊಬ್ಬ ರಕ್ಷಣೆಗಾಗಿ ಅಂಗಲಾಚುತ್ತಿದ್ದರೂ ನೂರಾರು ಜನ ಅದನ್ನು ನೋಡಿಯೂ ಸಹಾಯಕ್ಕೆ ಮುಂದಾಗದೆ ಅಮಾನವೀಯವಾಗಿ ವರ್ತಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ , ಸುಮಾರು ೪೫ ನಿಮಿಷ ರಕ್ತದ ಮಡುವಿನಲ್ಲಿ ನರಳುತ್ತಿದ್ದರು ಯಾವೊಬ್ಬ ವ್ಯಕ್ತಿಯು ಯುವಕನ ಸಹಾಯಕ್ಕೆ ಧಾವಿಸದೆ ಫೋಟೋ ತೆಗೆದು ವಿಕೃತಿ ಮೆರೆದ ಘಟನೆ ನಡೆದಿದೆ.ಈ ಘಟನೆ ಇಂದ  ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ನರಳುತ್ತಾ ಸಾವುಬದುಕಿನ ನಡುವೆ ಹೋರಾಡುತ್ತಿದ್ದ ಆ ಯುವಕನಿಗೆ ಸಹಾಯ ಮಾಡುವುದರ ಬದಲು ಅಲ್ಲಿ ಸುತ್ತುವರಿದಿದ್ದ ಜನ ತಮ್ಮ ಮೊಬೈಲ್‍ಗಳಿಂದ ಆ ಯಾತನೆಯ ನರಳಾಟವನ್ನು ಏನೂ ಆಗಿಲ್ಲವೆಂಬಂತೆ ಚಿತ್ರೀಕರಿಸಿಕೊಳ್ಳುತ್ತಿದ್ದುದು ಮಾನವೀಯತೆಗೇ ಹಾಕಿದ ಸವಾಲಿನಂತಿತ್ತು.
 ಮಾರ್ಕೆಟ್‍ ಒಂದರಲ್ಲಿ ಕೆಲಸ ಮಾಡುವ ಅನ್ವರ್ ಅಲಿ ನಿನ್ನೆ ಬೆಳಗ್ಗೆ ಸೈಕಲ್ ಮೇಲೆ ಕೂಲಿಕೆಲಸಕ್ಕೆ ಹೋಗುತ್ತಿದ್ದ. ಹೊಸಪೇಟೆಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಇವನ ಸೈಕಲ್‍ಗೆ ಗುದ್ದಿ ನಿಲ್ಲದೆ ಹೊರಟು ಹೋಗಿದೆ. ತೀವ್ರವಾಗಿ ಗಾಯಗೊಂಡ ಅಲಿ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ.

ಕೊನೆಗೆ ಆ್ಯಂಬುಲೆನ್ಸ್ ಬಂದು ಆಸ್ಪತ್ರೆಗೆ ಕರೆದೊಯ್ದಿದೆ. ಆಸ್ಪತ್ರೆ ತಲುಪುವ ವೇಳೆಗೆ ಅಲಿ ಕೊನೆಯುಸಿರೆಳೆದಿದ್ದಾನೆ. ಯಾರಾದರೂ ಸಹಾಯ ಮಾಡಿದ್ದರೆ ನನ್ನ ತಮ್ಮ ಬದುಕುಳಿಯುತ್ತಿದ್ದ ಎಂದು ಅಲಿಯ ಸಹೋದರ ರಿಯಾಜ್ ಅಳಲು ತೋಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ 


loading...

No comments