Breaking News

ಬೆಂಗಳೂರು ಕಸ ವಿಂಗಡಿಸದಿದ್ದರೆ ದಂಡ ವಸೂಲಿಗೆ ಬರಲಿದ್ದಾರೆ ನಿವೃತ್ತ ಯೋಧರು



ಬೆಂಗಳೂರು :  ನಗರದಲ್ಲಿನ ನಿವಾಸಿಗಳು ತಮ್ಮ ಮನೆಗಳಲ್ಲಿನ ಕಸವನ್ನು ವಿಂಗಡಿಸಿ ಪೌರ ಕಾರ್ಮಿಕರಿಗೆ ನೀಡದಿದ್ದಲ್ಲಿ ದಂಡ ವಸೂಲಿ ಮಾಡಲು ಮಾರ್ಚ್ ತಿಂಗಳಿನಿಂದ ನಿವೃತ್ತ ಯೋಧರ ತಂಡ ಮನೆ ಬಾಗಿಲಿಗೆ ಬರಲಿದೆ.

ಕಸ ವಿಂಗಡಣೆ ಕಡ್ಡಾಯ

ನಗರವನ್ನು ಸ್ವಚ್ಛತಾ ನಗರವನ್ನಾಗಿಸಲು ಪಾಲಿಕೆ ಎಣಗುತ್ತಿದೆ. ಇದಕ್ಕಾಗಿ ಪ್ರತಿ ನಾಗರಿಕರು ತಮ್ಮ ಮನೆಯಲ್ಲಿನ ಕಸವನ್ನು ಅಗತ್ಯಕ್ಕೆ ತಕ್ಕಂತೆ ವಿಂಗಡಿಸಿ ನೀಡಬೇಕಿರುವುದು ಕಡ್ಡಾಯ.

ಕಸ ವಿಂಗಡಿಸದೆ ಇರುವವರನ್ನು ಪತ್ತೆ ಮಾಡಲು ನಿವೃತ್ತ ಸೈನಿಕರನ್ನು ನೇಮಕ ಮಾಡಿಕೊಳ್ಳಲು ಪಾಲಿಕೆ ನಿರ್ಧರಿಸಿದೆ. ಈ ತಿಂಗಳ 1 ರಿಂದ 198 ವಾರ್ಡ್‌ಗಳಲ್ಲಿ ಆಟೋಗಳ ಮೂಲಕ ಹಾಗೂ ಕರಪತ್ರಗಳ ಮೂಲಕ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

-ಜಿ. ಪದ್ಮಾವತಿ ಮೇಯರ್

loading...

No comments