Breaking News

ಪನ್ನೀರ್‌ಸೆಲ್ವಂಗೆ ಎಐಎಡಿಎಂಕೆ ಇಂದ ಗೇಟ್ ಪಾಸ್


ತಮಿಳುನಾಡು : ಪನ್ನೀರ್ ಸೆಲ್ವಂ ಅವರು ಜಯಲಲಿತಾ ಅವರ ಆಪ್ತೆ ವಿಕೆ. ಶಶಿಕಲಾ ವಿರುದ್ಧ ಬಂಡಾಯವೆದ್ದಿರುವ ಬೆನ್ನಲ್ಲೇ ಎಐಎಡಿಎಂಕೆ ಪಕ್ಷದಲ್ಲಿ ಅನಿರೀಕ್ಷಿತ ಬೆಳವಣಿಗೆಯೊಂದು ಕಂಡು ಬಂದಿದ್ದು, ಶಶಿಕಲಾ ಅವರು ತಡರಾತ್ರಿ ಪಕ್ಷದ ಖಜಾಂಚಿ ಸ್ಥಾನದಿಂದ ಸೆಲ್ವಂ ಅವರನ್ನು ಕಿತ್ತುಹಾಕಿದ್ದಾರೆ ಎಂದು ತಿಳಿದು ಬಂದಿದೆ .

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸೆಲ್ವಂ ಅವರು, ಪಕ್ಷದ ಖಜಾಂಚಿ ಸ್ಥಾನವನ್ನು ಜಯಲಲಿತಾ ಅವರು ನೀಡಿದ್ದು, ಸ್ಥಾನದಿಂದ ಕಿತ್ತು ಹಾಕುವ ಹಕ್ಕು ಶಶಿಕಲಾ ಅವರಿಗಿಲ್ಲ. ಪಕ್ಷದ ಕಾರ್ಯಕರ್ತರು ಹಾಗೂ ರಾಜ್ಯದ ಜನತೆಯ ಇಚ್ಛೆಗಳಂತೆ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ಶಶಿಕಲಾ ಅವರ ನಿರ್ಧಾರದ ಹಿಂದೆ ಎಐಎಡಿಎಂಕೆ ಇದೆ ಎಂಬ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ.
10 ವರ್ಷಗಳ ಹಿಂದೆ ಪಕ್ಷದ ಖಜಾಂಚಿ ಸ್ಥಾನವನ್ನು 'ಅಮ್ಮ' ಜಯಲಲಿತಾ ಅವರು ನೀಡಿದ್ದರು. ಅಮ್ಮ ನೀಡಿದ್ದ ಜವಾಬ್ದಾರಿಯನ್ನು ನಾನು ಪೂರ್ಣಗೊಳಿಸಿದ್ದೇನೆ. ಇದರಿಂದ ಅಮ್ಮ ಸಂತೃಪ್ತಿಗೊಂಡಿದ್ದಾರೆ. ನಾನು ಯಾವುದೇ ತಪ್ಪನ್ನು ಮಾಡಿಲ್ಲ. ಯಾವುದಕ್ಕೂ ನಾನು ಹೆದರುವುದಿಲ್ಲ. ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆಂದು ತಿಳಿಸಿದ್ದಾರೆ.
loading...

No comments