Breaking News

ಹುಡುಗಿಯರು ಕುರೂಪಿ, ವಿಕಲರಾಗಿದ್ದರೆ ವರದಕ್ಷಿಣೆ ಬೇಡಿಕೆ’ : ಮಹಾ ಪಠ್


ಮುಂಬೈ : ಸಮಾಜದಲ್ಲಿ ವರದಕ್ಷಿಣ ಪದ್ಧತಿ ಇನ್ನೂ ಏಕೆ ಜಾರಿಯಲ್ಲಿದೆಯೆಂಬುದಕ್ಕೆ ವಿಚಿತ್ರ ಕಾರಣವೊಂದನ್ನು ಮಹಾರಾಷ್ಟ್ರದ 12ನೇ ತರಗತಿಯ ಪಠ್ಯ ಪುಸ್ತಕದಲ್ಲಿ ನೀಡಲಾಗಿದೆ. ಅದೇನೆಂದರೆ “ಕುರೂಪಿ ಅಥವಾ ಅಂಗವಿಕಲರಾಗಿರುವ ಹುಡುಗಿಯರು ವಿವಾಹವಾಗಲು ಕಷ್ಟಪಡುತ್ತಿರುವುದರಿಂದ ಅವರನ್ನು ಮದುವೆಯಾಗಲು ಮುಂದೆ ಬರುವ ವರ ಹಾಗೂ ಆತನ ಕುಟುಂಬ ವರದಕ್ಷಿಣೆಯ ಬೇಡಿಕೆಯಿಡುತ್ತವೆ ಹಾಗೂ ಇದಕ್ಕೆ  ವಧುವಿನ ಅಸಹಾಯಕ ಹೆತ್ತವರೂ ಒಪ್ಪುತ್ತಾರೆ.’

ಹೈಯರ್ ಸೆಕೆಂಡರಿ ಬೋರ್ಡ್ ಪರೀಕ್ಷೆಗೆ ಹಾಜರಾಗುವ ಲಕ್ಷೋಪಲಕ್ಷ ವಿದ್ಯಾರ್ಥಿಗಳು ಈ ಪಠ್ಯಪುಸ್ತಕವನ್ನು ಉಪಯೋಗಿಸುತ್ತಿರುವುದರಿಂದ ಈ  ವರದಕ್ಷಿಣೆಯ ಬಗೆಗಿನ ಪಠ್ಯವು ತೀವ್ರ ಟೀಕೆಗೆ ಗುರಿಯಾಗಿದೆ. 
loading...

No comments