Breaking News

ದುಬೈನಲ್ಲಿ ಪ್ರಾಕೃತಿಕ ವಿಕೋಪ ಜನ ಜೀವನ ಅಸ್ತವ್ಯಸ್ತ


ದುಬೈ:- ಫೆ3 ಪ್ರವಾಸಿ ತಾಣ ಅನಿವಾಸಿ ಭಾರತೀಯರ ನೆಚ್ಚಿನ ರಾಷ್ಟ್ರ ಯುಎಯಿ ಯಲ್ಲಿ ಪ್ರಕೃತಿ ವಿಕೋಪ ಕಾಣಿಸಿಕೊಂಡಿದೆ.

ಕಳೆದ ಕೆಲವು ದಿನದಿಂದ ಹವಾಮಾನದಲ್ಲಿನ ವೈಪರೀತ್ಯಕ್ಕೆ ಯುಎಯಿ ಜನತೆ ಥತ್ತರಿಸಿದ್ದಾರೆ ಒಂದೆಡೆ ಶೀತಗಾಳಿ,ಇನ್ನೊಂದೆಡೆ ಬಿರುಸಿನ ಮಳೆ ,ಮತ್ತೊಂದೆಡೆ ಹಿಮಪಾತ ಎಲ್ಲವೂ ಜನರನ್ನು ಅ ತಂತ್ರವಾಗಿಸಿದೆ ಅದರಲ್ಲೂ ಇಂದು ರಾಸಾಲ್ಕೈಮಾ ದಲ್ಲಿ ಚಳಿಯ ತೀವ್ರತೆ -2°ವರೆಗೆ ದಾಟಿದ್ದು ಪರಿಸ್ಥಿತಿ ಬಹಳ ಹದಗೆಟ್ಟಿದೆ .

ಸತತವಾಗಿ ಸುರಿಯುತ್ತಿರುವ ಹಿಮಪಾತದಿಂದ ಜನರು ಮನೆ ಬಿಟ್ಟು ಹೊರಗಡೆ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು ಹಲವು ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ ಎಂದು ಸ್ಥಳೀಯ ಸುದ್ದಿ ಮಾಹಿನಿ ವರದಿ ಮಾಡಿದೆ.

ದುಬೈ ,ಶಾರ್ಜದಲ್ಲಿ ಮಧ್ಯಾಹ್ನದ ಬಳಿಕ ಮರಳುಗಾಳಿ ಆರಂಭವಾಗಿದ್ದು ವಾತಾವರಣ ತೀವ್ರ ಹದಗೆಟ್ಟಿದೆ ಇದರ ಅನ್ವಯ ಕೆಲವೊಂದು ಮೆಟ್ರೊ ರೈಲು ಬಸ್ ಸಂಚಾರ ಸ್ಥಗಿತಗೊಳ್ಳಿಸಲಾಗಿದೆ ಎಂದು ದುಬೈ ಸಾರಿಗೆ ಸಂಸ್ಥೆ ತಿಳಿಸಿದೆ .

 ಇದೇ ವಾತಾವರಣ ಮುಂದಿನ ಎರಡು ದಿನಗಳು ಇರಲಿವೇ ಎಂದು ಹವಾಮಾನ ಇಲಾಖೆ ವರದಿಮಾಡಿದೆ.

loading...

No comments