ಭಾರತೀಯ ಐಪೋನ್ ಗ್ರಾಹಕರಿಗೆ ಸಿಹಿ ಸುದ್ದಿ
ಬೆಂಗಳೂರು:- ದೇಶದಲ್ಲಿ ಮೊಬೈಲ್ ಕ್ರಾಂತಿ ನಡೆಯುತ್ತಾ ಇದ್ದಂತೆ ಹಲವಾರು ಮೊಬೈಲ್ ಕಂಪೆನಿಗಳು ಇದೀಗ ಭಾರತದ ಮೇಲೆ ಕಣ್ಣಿಟ್ಟಿವೆ ಇದಕ್ಕೆ ಹೊಸ ಸೇರ್ಪಡೆ ಮೊಬೈಲ್ ಕ್ಷೇತ್ರದ ದೊಡ್ದಣ ಅಂತ ಕರೆಸಿಕೊಳ್ಳುವ ಐ ಪೋನ್ .
ದೇಶದಲ್ಲಿ ದಿನದಿಂದ ದಿನಕ್ಕೆ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಾ ಇದ್ದಂತೆ ಮೊಬೈಲ್ ವಿನ್ಯಾಸಗಳು ಬದಲಾಗುತ್ತಾ ಇವೇ ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ವಿಭಿನ್ನ ಕಸರತ್ತು ನಡೆಸುತ್ತಾರೆ .
ಭಾರತದಲ್ಲಿ ತಯಾರಾಗುವ ಕೆಲವು ಮೊಬೈಲ್ ಕಂಪೆನಿಗಳು ಇದೀಗ ವಿಶ್ವಮಟ್ಟಲ್ಲಿ ಸುದ್ದಿಯಾಗುತ್ತಾ ಇದ್ದಂತೆ ಐ ಪೋನ್ ಕೂಡ ಗ್ರಾಹಕರನ್ನು ಸೆಳೆಯಲು ಹೊಸ ಸಾಹಸಕ್ಕೆ ಕೈಹಾಕಿದೆ .
ತನ್ನ ಮೊದಲ ಐ ಪೋನ್ ತಯಾರಿಕ ಘಟಕ ಭಾರತದಲ್ಲಿ ತೆರೆಯಲು ಸಿದ್ದತೆ ನಡೆಸಿದೆ .
ಈ ಮೂಲಕ ಆಮದು ಸುಂಕ ಕಡಿಮೆ ಬೀಳುವುಂದರಿಂದ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಐ ಪೋನ್ ಕೊಂಡುಕೊಳ್ಳ ಬಹುದು ಎಂದು ತಿಳಿಸಿದ್ದಾರೆ.
ಭಾರತದ ಮೊದಲ ಐಪೋನ್ ಘಟಕ ಐಟಿ ಸಿಟಿ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಿದ್ದು ಅದರ ಸಂಬಂಧ ಸರ್ಕಾರದ ಓಪ್ಪಿಗೆ ಲಭಿಸಿದೆ ಎಂದು ಐಪೋನ್ ಭಾರತೀಯ ಮೂಲ ಸ್ವಷ್ಟಪಡಿಸಿದೆ .
ಎಲ್ಲ ಅಂದು ಕೊಂಡಂತೆ ನಡೆದರೆ ಇದೇ ಬರುವ ಜುಲೈ ನಿಂದ ತನ್ನ ಘಟಕ ಸ್ಥಾಪಿಸಲಿದೆ.
loading...
No comments