Breaking News

ದುಷ್ಕರ್ಮಿಗಳನ್ನು ಬೆನ್ನತ್ತಿ ಬಾವಿಗೆ ಬಿದ್ದ ಪೇದೆ


   

ಬೆಳಗಾವಿ : ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದಾಗ ದಾರಿ ಮೇಲೆ ತನ್ನ ಮೇಲೆ ದಾಳಿಗೆ ಮುಂದಾದ ಮೂವರು ದಾಳಿಕೋರರರಿಂದ ತಪ್ಪಿಸಿಕೊಳ್ಳುವ ದೆಸೆಯಲ್ಲಿ ಯದ್ವಾತದ್ವಾ ಓಡಿದ ಪೊಲೀಸ್ ಪೇದೆಯೊಬ್ಬ 30 ಅಡಿ ಆಳದ ಬಾವಿಯೊಳಗೆ ಬಿದ್ದು, ರಾತ್ರಿಪೂರ್ತಿ ಬಾವಿಯಲ್ಲೇ ಕಳೆಯುವಂತಾದ ಘಟನೆ ನಡೆದಿದೆ.

ಕಾಕಟಿ ಪೊಲೀಸ್ ಠಾಣೆಯ ಪೊಲೀಸ್ ಕಾನ್‍ಸ್ಟೇಬಲ್ ರಾಜು ಕೆರಿಮನಿ (26) ಎಂಬವರು ಮಂಗಳವಾರ ರಾತ್ರಿ ಬಾವಿಗೆ ಬಿದ್ದಿದ್ದರು.

ದಾರಿಮಧ್ಯೆ ಕಾರೊಂದರಲ್ಲಿ ಮಹಿಳೆಯೊಬ್ಬಳ ಮೇಲೆ ಕೆಲವರು ಅನೈತಿಕ ಚಟುವಟಿಕೆ ನಡೆಸುತ್ತಿದ್ದ ದೃಶ್ಯ ಕಂಡ ರಾಜು, ದುಷ್ಕರ್ಮಿಗಳನ್ನು ಹಿಂಬಾಲಿಸಿ ತನ್ನ ಮೊಬೈಲಿನಲ್ಲಿ ಕಾರಿನ ಚಾಲಕನ ಭಾವಚಿತ್ರ ಸೆರೆಹಿಡಿದರು. ಇದನ್ನು ಕಂಡ ಕಾರಿನಲ್ಲಿದ್ದ ಮೂವರು ಚೂರಿ ಹಿಡಿದುಕೊಂಡು ರಾಜುಗೆ ಹಲ್ಲೆ ನಡೆಸಲು ಮುಂದಾದರು. ಪ್ರಾಣಭೀತಿಯಿಂದ ಓಡಿದ ರಾಜು, ಕತ್ತಲಲ್ಲಿ ಕಾಣದೆ ಬಾವಿಯೊಳಗೆ ಬಿದ್ದರು. ಅವರ ಕಾಲು ಮುರಿದಿದೆ.

ಬುಧವಾರದಂದು ಜಾಗದ ಮಾಲಕ ತನ್ನ ಬಾವಿಯಲ್ಲಿ ಬಿದ್ದಿದ್ದ ಪೊಲೀಸ್ ಪೇದೆಯನ್ನು ಕಂಡು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಬಳಿಕ ರಾಜುವನ್ನು ಬಾವಿಯಿಂದ ಮೇಲಕ್ಕೆತ್ತಿ, ಆಸ್ಪತ್ರೆಗೆ ದಾಖಲಿಸಲಾಗಿದೆ.

loading...

No comments