Breaking News

ಸೋಮವಾರ ಅಧಿವೇಶನದಲ್ಲಿ ಕಂಬಳ ಮಸೂದೆ ಮಂಡನೆ


ಬೆಂಗಳೂರು : ಸೋಮವಾರ ಆರಂಭಗೊಳ್ಳ ಲಿರುವ ರಾಜ್ಯ ಅಸೆಂಬ್ಲಿಯ ಜಂಟಿ ಅಧಿವೇಶನದಲ್ಲಿ ಕರಾವಳಿ ಕರ್ನಾಟಕದ ಜಾನಪದ ಕ್ರೀಡೆಯಾದ `ಕಂಬಳ’ವನ್ನು ಕಾನೂನುಬದ್ಧಗೊಳಿಸುವ ಮಸೂದೆ ಮಂಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

“ಮಸೂದೆ ಈಗಾಗಲೇ ಸಿದ್ಧಗೊಂಡಿದ್ದು, ಈ ಬಗ್ಗೆ ರಾಜಕೀಯ ಮಟ್ಟದಲ್ಲಿ ಇಂದು ಚರ್ಚೆ ನಡೆಯಲಿದೆ. ಸಮಗ್ರ ಅಧ್ಯಯನಕ್ಕಾಗಿ ಮಸೂದೆಯನ್ನು ಪಶು ಸಂಗೋಪನಾ ಇಲಾಖೆಗೆ ಕಳುಹಿಸಲಾಗಿದ್ದು, ಅದೀಗ ಕಾನೂನು ಇಲಾಖೆ ತಲುಪಿದೆ” ಎಂದು ಕಾನೂನು ಸಚಿವ ಜಯಚಂದ್ರ ತಿಳಿಸಿದರು.

ಕಂಬಳದ ಮೇಲಿನ ನಿಷೇಧ ತೆರವುಗೊಳಿಸಿ, ಅದನ್ನು ಪುನರ್ ಅನುಷ್ಠಾನಗೊಳಿಸಲು ಮಸೂದೆಯೊಂದು ರಚಿಸಲಾಗುವುದು ಎಂದು ಸೀಎಂ ಕಳೆದ ತಿಂಗಳು ಪ್ರಕಟಿಸಿದ್ದರು. ಅದರಂತೆ ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ.
K ale

loading...

No comments