ಎಟಿಎಂ ನಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ ಆರೋಪಿ ಬಂಧನ
ಬೆಂಗಳೂರು : ರಾಜಧಾನಿ ಬೆಂಗಳೂರಿನ ಜೆ.ಸಿ.ರಸ್ತೆಯ ಕಾರ್ಪೊರೇಶನ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಪೊಲೀಸರು ಆರೋಪಿಯನ್ನು ಆಂಧ್ರದ ಮದನ ಪಲ್ಲಿಯಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ .ಸುಮಾರು ಮೂರುವರೆ ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಪೊಲೀಸರಿಗೆ ಕಬ್ಬಿಣದ ಕಡಲೆ ಆಗಿ ಬಿಟ್ಟಿದ್ದನು ,ಕೃತ್ಯ ನಡೆಸಿದ ಆರೋಪಿ ತಲೆ ಬೋಳಿಸಿ ತಲೆಮರೆಸಿಕೊಂಡಿದ್ದ ಇದೀಗ ಆರೋಪಿಯನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ .
ಘಟನೆ ಹಿನ್ನಲೆ :
ನವೆಂಬರ್. 19 2013ರಂದು ಬೆಳಗ್ಗೆ 7.15 ರ ಸುಮಾರಿಗೆ ಕಾರ್ಪೋರೇಶನ್ ಎಟಿಎಂನಲ್ಲಿ ಹಣ ತೆಗೆದುಕೊಳ್ಳಲು ಬಂದಿದ್ದ ಬ್ಯಾಂಕ್ ಅಧಿಕಾರಿ ಜ್ಯೋತಿ ಯಾದವ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಜ್ಯೋತಿ ಅವರು ಒಳಗೆ ಹೋಗುತ್ತಿದ್ದಂತೆ ದುಷ್ಕರ್ಮಿಯೊಬ್ಬ ಎಟಿಎಂ ಗೇಟ್ ಎಳೆದು ಹಣಕ್ಕಾಗಿ ಪೀಡಿಸಿದ್ದ. ಜ್ಯೋತಿ ಹಣ ನೀಡಲು ಒಪ್ಪದಿದ್ದಾಗ ಅವರ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದ.
ಹಂತಕನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಜ್ಯೋತಿ ಉದಯ್ ಅವರು ಒಂದು ತಾಸು ಎಟಿಎಂ ಒಳಗೆ ಬಿದ್ದಿದ್ದರು. ಆದರೆ ಯಾರಿಗೂ ಇದು ಗಮನಕ್ಕೆ ಬಂದಿರಲಿಲ್ಲ. ಸುಮಾರು 8 ಗಂಟೆ ಸುಮಾರಿಗೆ ರಕ್ತ ಹರಿದು ಹೊರ ಬಂದಾಗ ಅಲ್ಲಿ ಓಡಾಡುತ್ತಿದ್ದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆರೋಪಿ ಪತ್ತೆಗಾಗಿ 15 ವಿಶೇಷ ತಂಡಗಳನ್ನು ರಚಿಸಿ 400ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು
loading...
No comments