Breaking News

ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿ ಇದೆ ಓಬಿರಾಯನ ಕಾಲದ ಸೇತುವೆ


ಮಂಗಳೂರು-ಕುಂದಾಪುರ ಹೆದ್ದಾರಿಯ ಚತುಷ್ಪಥ ಕಾಮಗಾರಿಗಳು ನಡೆಯುತ್ತಿದ್ದರೂ 1959ರಲ್ಲಿ ಹೆದ್ದಾರಿ ನಿರ್ಮಾಣ ಸಂದರ್ಭ ನಿರ್ಮಿಸಲಾದ ಹಳೆಯ ಸೇತುವೆಗಳೇ ಕಾರ್ಯಾಚರಿಸುತ್ತಿದ್ದು, ಅದು ಹೆದ್ದಾರಿ ಪ್ರಯಾಣಿಕರಿಗೆ ಎಷ್ಟು ಸುರಕ್ಷಿತ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಉಡುಪಿಯ ಸಂತೆಕಟ್ಟೆ-ಉದ್ಯಾವರ-ಮುಲ್ಕಿ-ಹಾವಂಜೆ ಮುಂತಾದ ಕಡೆಗಳ ಸೇತುವೆಗಳು ಹೆದ್ದಾರಿ ನಿರ್ಮಾಣದ 1959ನೇ ಇಸವಿಯಲ್ಲಿ ಅಸ್ಥಿತ್ವಕ್ಕೆ ಬಂದಿದ್ದು, ಇದೀಗ ಆ ಸೇತುವೆಗಳು ಆಯುಷ್ಯ ಕಳೆದುಕೊಂಡಿದ್ದರೂ ಸೇವೆಯಿಂದ ನಿವೃತ್ತಿಗೊಂಡಿಲ್ಲ. ಅದರಲ್ಲೂ ಕರಾವಳಿ ಪ್ರದೇಶದಲ್ಲಿ ಉಪ್ಪು ನೀರಿನ ಹಾವಳಿಯಿಂದಾಗಿ ಸೇತುವೆಯ ಪಿಲ್ಲರುಗಳಿಗೆ ಬೇಗ ಹಾನಿಯಾಗುತ್ತಿರುವುದನ್ನು ಇಲ್ಲಿ ಗಮನಿಸ ಬಹುದಾಗಿದೆ. ಅದಲ್ಲದೆ ಈ ಹಿಂದೆ ಹೆದ್ದಾರಿ ನಿರ್ಮಾಣದ ಸಂದರ್ಭ ಐದು, ಹತ್ತು, ಟನ್ ತೂಕದ ಟ್ರಕ್ಕುಗಳು ಓಡಾಡುತ್ತಿದ್ದು, ಇದೀಗ ಐವತ್ತು ಟನ್ನಿಗೂ ಅಧಿಕ ಭಾರದ ಟ್ರಕ್ಕುಗಳು ಓಡಾಡುತ್ತಿದೆ.ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ 
-kale

loading...

No comments