ಲಕ್ಷ್ಮೀ ಪೂಜೆ ಮಾಡಿದ ಪಾಪ್ ಗಾಯಕಿ ಮಿಲಿ ಸೈರಸ್
ಕ್ಯಾಲಿಫೋರ್ನಿಯಾ: ಸಾಕಷ್ಟು ಹಣ ಹರಿದು ಬರಲಿ ಎಂಬ ಆಶಯದೊಂದಿಗೆ ಖ್ಯಾತ ಪಾಪ್ ಗಾಯಕಿ ಮಿಲಿ ಸೈರಸ್ ಅವರು ಮನೆಯಲ್ಲಿ ಲಕ್ಷ್ಮೀ ಪೂಜೆ ಮಾಡಿ ಸುದ್ದಿಯಾಗಿದ್ದಾರೆ. ಹಿಂದೂ ಪದ್ಧತಿಗನುಸಾರವಾಗಿ ಲಕ್ಷ್ಮೀ ಪೂಜೆ ನಡೆಸಿರುವ ಪೋಟೊ ಸಹಿತ ಸುದ್ದಿಯನ್ನು24 ವರ್ಷದ ಮಿಲಿ ಸೈರಸ್ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ದೊಡ್ಡ ಸೆಲೆಬ್ರಿಟಿಗಳಾಗಿ ಗುರತಿಸಿಕೊಂಡಿದ್ದರೂ ಆಂತರ್ಯದಲ್ಲಿ ಆಧ್ಯಾತ್ಮದ ಸೆಳೆತ ಅವರಿಗೂ ಅಗತ್ಯವಾಗಿರುತ್ತದೆ. ವಿಶ್ವಶಾಂತಿ ಹಾಗೂ ನೆಮ್ಮದಿಗಾಗಿ ಏನಾದರೂ ಮಾಡಬೇಕೆಂಬ ಧನಾತ್ಮಕ ಯೋಚನೆ ಅವರಲ್ಲಿ ಇರುವುದು ಇಂಥಹ ಸಂದರ್ಭಗಳಲ್ಲಿ ಪ್ರಕಟವಾಗುತ್ತವೆ. ಇದೇ ಮಿಲಿ ಸೈರಸ್ ಅವರಲ್ಲೂ ಕಾಣಿಸಿಕೊಂಡಿದೆ ಎನ್ನಬಹುದು.
loading...
No comments