ಶಾಸಕಾಂಗ ನಾಯಕನಾಗಿ ಕೆ.ಪಳಿನಿಸ್ವಾಮಿ ಆಯ್ಕೆ
ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಕೆ ಶಶಿಕಲಾಳನ್ನು 4 ವರ್ಷ ಜೈಲು ಶಿಕ್ಷೆ ಹಾಗೂ 10 ಕೋಟಿ ದಂಡ ವಿಧಿಸಿದ ನಂತರ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ಅನರ್ಹರಾಗಿದ್ದು ಮುಂದಿನ 10 ವರ್ಷಗಳ ಕಾಲ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಪನ್ನೀರ್ ಸೆಲ್ವಂ'ಗೆ ಮತ್ತೊಂದು ಶಾಕ್ ನೀಡಿರುವ ಚಿನ್ನಮ್ಮ ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟಿಸಿ ರಾಜ್ಯ ಲೋಕೋಪಯೋಗಿ ಸಚಿವರಾದ ಕೆ.ಪಳಿನಿಸ್ವಾಮಿಯನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ನೆ ಮಾಡಿದ್ದಾರೆ. ಕೆಲವು ಕ್ಷಣಗಳಲ್ಲಿ ಸಚಿವ ಪಳಿನಿ ಸ್ವಾಮಿ ಬೆಂಬಲಿಗ ಶಾಸಕರ ಸಹಿಯ ಪ್ರತಿಯೊಂದಿಗೆ ರಾಜ್ಯಪಾಲ ವಿದ್ಯಾಸಾಗರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
via suvarana news
loading...
No comments