Breaking News

ರೋಹಿತ್ ವೆಮುಲ ದಲಿತನಲ್ಲ : ಆಂದ್ರಸರ್ಕಾರ ನಡೆಸಿದ ತನಿಖೆಯಲ್ಲಿ ಬಹಿರಂಗ.

ಆಂದ್ರಪ್ರದೇಶ : ಹೈದರಾಬಾದ್ ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ ನಡೆದ ಘರ್ಷಣೆಯೊಂದಕ್ಕೆ ಸಂಬಂಧಿಸಿದಂತೆ ಕಾಲೇಜಿನಿಂದ ಅಮಾನತುಗೊಂಡಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿ ರೋಹಿತ್ ವೆಮುಲ ದಲಿತನಲ್ಲ ಆತ 'ಇತರ ಹಿಂದುಳಿದ ವರ್ಗ'ಗಳಿಗೆ (OBC) ಸೇರಿದ ವಡ್ಡೇರ ಸಮುದಾಯಕ್ಕೆ ಸೇರಿದವನು ಎಂಬುದು ಆಂದ್ರಪ್ರದೇಶ ಸರ್ಕಾರ ನಡೆಸಿದ ತನಿಖೆಯಿಂದ ತಿಳಿದು ಬಂದಿದೆ.
ರೋಹಿತ್ ವೆಮುಲ ತಾಯಿ ಜೊತೆ ರಾಹುಲ್ ಗಾಂಧಿ
ಮೃತ ರೋಹಿತ್ ವೆಮುಲ ಮತ್ತು ಆತನ ತಾಯಿ ವಂಚನೆಯ ಮೂಲಕ ನಕಲಿ ದಲಿತ ಜಾತಿ ಪ್ರಮಾಣ ಪತ್ರಗಳನ್ನು ಸೃಷ್ಟಿಸಿದ್ದಾರೆ, ಹೀಗಾಗಿ ಆ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಅಸಿಂದು ಗೊಳಿಸಲಾಗುವುದು ಎಂದು ಸರ್ಕಾರ ಹೇಳಿದೆ. ಈ ಬಗ್ಗೆ ರೋಹಿತ್ ತಾಯಿ ರಾಧಿಕ ವೆಮುಲ ಅವರಿಗೆ ಶೋಕಾಸ್ ನೋಟೀಸ್ ನೀಡಲಾಗಿದ್ದು 'ತಾವು ಇತರ ಹಿಂದುಳಿದ ವರ್ಗ'ಗಳಿಗೆ (OBC) ಸೇರಿದ ವಡ್ಡೇರ ಸಮುದಾಯಕ್ಕೆ ಸೇರಿದವರು ಹೌದೋ ಅಲ್ಲವೋ' ಎಂಬುದನ್ನು ಖಚಿತ ಪಡಿಸಲು ಹೇಳಿದೆ. ಜೊತೆಗೆ ಈಗಲೂ ನೀವು ದಲಿತರು ಎಂಬುದನ್ನೇ  ಸಾಧಿಸುವುದಾದರೆ ಅದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು 15ದಿನಗಳೊಳಗೆ ಒದಗಿಸುವಂತೆ ಕೇಳಿಕೊಂಡಿದೆ.
ರೋಹಿತ್ ವೆಮುಲ ತಾಯಿ ರಾಧಿಕ ವೆಮುಲ
ವಿಶ್ವವಿದ್ಯಾಲಯದಲ್ಲಿ ನಡೆದ ಘರ್ಷಣೆಯೊಂದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ರೋಹಿತ್ ಸೇರಿದಂತೆ ಮತ್ತೈವರು ವಿದ್ಯಾರ್ಥಿಗಳನ್ನು 2015ರ ಆಗಸ್ಟ್ ತಿಂಗಳಿನಲ್ಲಿ ವಿವಿಯಿಂದ ಅಮಾನತು ಮಾಡಿದ್ದರು. ಇದರಿಂದ ನೊಂದಿದ್ದ ರೋಹಿತ್ ಆತ್ಮಹತ್ಯೆಗೆ ಶರಣಾಗಿದ್ದ. ರೋಹಿತ್ ವೆಮುಲ ವಿಶ್ವವಿದ್ಯಾನಿಲಯಕ್ಕೆ ದಲಿತ ಜಾತಿ ಪ್ರಮಾಣ ಪತ್ರ ನೀಡಿ ಸೇರಿದ್ದರಿಂದ ಆತನ ಆತ್ಮಹತ್ಯೆಯ ನಂತರ ಅದು ದಲಿತ ವಿದ್ಯಾರ್ಥಿಯ ಆತ್ಮಹತ್ಯೆ ಎಂದು ದೇಶವ್ಯಾಪ್ತಿ ದಲಿತ ಸಂಘಟನೆಗಳು, ಚಿಂತಕರು, ರಾಜಕೀಯ ಪಕ್ಷಗಳು ಸೇರಿ ಬಿಜೆಪಿ ಸರ್ಕಾರದ ವಿರುದ್ದ ಹೋರಾಟ ನಡೆಸಿತ್ತು.
loading...

No comments