ಎರಡು ಕುಟುಂಬಗಳು ಉತ್ತರ ಪ್ರದೇಶವನ್ನು ಲೂಟಿ ಮಾಡಲು ಹೊಂಚು ಹಾಕುತ್ತಿದ್ದಾರೆ ಎಚ್ಚರದಿಂದಿರಿ – ಮೋದಿ
ಬಿಜ್ನೋರ್: ಉತ್ತರ ಪ್ರದೇಶದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಭಾಷಣ ಮಾಡಿದ ಮೋದಿ, ಎರಡೂ ಕುಟುಂಬಗಳು ಪ್ರತ್ಯೇಕ ಸಂದರ್ಭಗಳಲ್ಲಿ ದೇಶ ಮತ್ತು ಉತ್ತರ ಪ್ರದೇಶವನ್ನು ನಾಶ ಮಾಡಿವೆ. ಒಬ್ಬರು ಉತ್ತರ ಪ್ರದೇಶವನ್ನು ನಾಶ ಮಾಡಿದರೆ, ಮತ್ತೊಬ್ಬರು ದೇಶವನ್ನು ನಾಶ ಮಾಡಿದರು. ಈಗ ಆ ಎರಡೂ ಕೈಗಳು ಸೇರಿದರೆ ಏನಾಗುತ್ತದೆ ಎಂದು ಯೋಚಿಸಿ ಎಂದು ಮತದಾರರ ಮುಂದೆ ಪ್ರಶ್ನೆಯನ್ನಿಟ್ಟರು.
ಜತೆಗೆ, ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಬಾಲಿಷ ವರ್ತನೆ ಕುರಿತು ಹಲವು ನಗೆ ಚಟಾಕಿಗಳನ್ನೂ ಹರಿಯಬಿಟ್ಟರು.
ಸರ್ಕಾರದ ದುರಾಡಳಿತದಿಂದ ಜನ ತತ್ತರಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಮಾಡಿದ ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ದಾರಿ ಹಿಡಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ನಮ್ಮ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಲಿದೆ. ಕಬ್ಬು ಬೆಳೆಗಾರರ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಸಣ್ಣ ಮತ್ತು ಅತಿ ಸಣ್ಣ ರೈತರ ಹಿತ ಕಾಯಲು ಸಾಲಾ ಮನ್ನಾ ಮಾಡಲಾಗುವುದು ಎಂದು ಮೋದಿ ಭರವಸೆ ನೀಡಿದರು.
loading...
No comments