Breaking News

ಬೆಂಗಳೂರು ಮಾನವೀಯತೆ ಮೆರೆದ ಇನ್ಸ್'ಪೆಕ್ಟರ್ಬೆಂಗಳೂರು : ಅಪಘಾತದಲ್ಲಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ಮಾನವೀಯತೆ ಮೆರೆದ ಘಟನೆ ನಡೆದಿದೆ. ಅಪಘಾತಗೊಂಡವರನ್ನ ಪೊಲೀಸ್ ಜೀಪ್ ಮೂಲಕ ಕರೆದುಕೊಂಡು ಹೋಗಿ, ಬಾಣಸವಾಡಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಕಳೆದ ರಾತ್ರಿ ಕೆ.ಆರ್. ಪುರಂ ಬಳಿಯ ರಾಮೂರ್ತಿ ನಗರದ ಬಳಿಯಿರೋ ಹೊಯ್ಸಳ ನಗರ 8ನೇ ಕ್ರಾಸ್ ಬಳಿ ಇನೋವಾ ಹಾಗೂ ಬುಲೆಟ್ ಬೈಕ್ ನಡುವೆ ಅಪಘಾತವಾಗಿತ್ತು. ಈ ವೇಳೆ ಬೈಕ್ ಸವಾರರಾದ ಕಿರಣ್ ಮತ್ತು ಅರುಣ್ ಕುಮಾರ್ ಎಂಬುವವರು ಗಾಯಗೊಂಡಿದ್ದರು. ಕಣ್ಣಾರೆ ಕಂಡರೂ ಸಾರ್ವಜನಿಕರು ಗಾಯಾಳುಗಳನ್ನು ರಕ್ಷಿಸಲು ಹಿಂದೇಟು ಹಾಕಿದ್ದರು. ಇದೇ ಮಾರ್ಗದಲ್ಲಿ ಬಂದ ರಾಮಮೂರ್ತಿನಗರ ಪೊಲೀಸ್ ಠಾಣೆ ಇನ್ಸ್‌'ಪೆಕ್ಟರ್ ಚಂದ್ರಧರ್, ಗಾಯಾಳುಗಳ ರಕ್ಷಣೆಗೆ ಮುಂದಾದರು. ಸದ್ಯ ಅರುಣ್ ಕುಮಾರ್‌ಗೆ ಸಣ್ಣ ಪುಟ್ಟ ಗಾಯಗಳಾಗಿದ್ದರೆ, ಕಿರಣ್ ಎಂಬುವವರಿಗೆ ಕಾಲು ಮುರಿದಿದ್ದು, ತಲೆಗೆ ಗಂಭೀರ ಗಾಯವಾಗಿತ್ತು. ಇಬ್ಬರನ್ನು ಬಾಣಸವಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆ.ಆರ್ ಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾಹನಗಳನ್ನ ವಶಕ್ಕೆ ಪಡೆಕೊಳ್ಳಲಾಗಿದೆ.


loading...

No comments