Breaking News

ಬೆಂಗಳೂರಲ್ಲಿದ್ದಾರೆ ಬರೋಬ್ಬರಿ 8930 ರೌಡಿಶೀಟರ್ಸ್


ಬೆಂಗಳೂರು: ನಗರ ಹಾಗೂ ಹೊರವಲಯದಲ್ಲಿ 8,930 ರೌಡಿಶೀಟರ್'ಗಳಿದ್ದು, ಈ ಪೈಕಿ ಸುಮಾರು 2,700 ಜನರು ರಿಯಲ್ ಎಸ್ಟೇಟ್ ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಈಗ ರೌಡಿಶೀಟರ್'ಗಳ ಆದಾಯದ ಮೂಲದ ಪತ್ತೆ ಹಚ್ಚಲಾಗುತ್ತಿದ್ದು, ಅವರ ಅಸಲಿ ಮುಖವಾಡ ಕಳಚಿಬೀಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸರ ಗುಡುಗು:
ಇತ್ತೀಚೆಗೆ ರಾಜಧಾನಿಯನ್ನೇ ಬೆಚ್ಚಿಬೀಳಿಸಿದ ಹಾಡಹಗಲೇ ನಡುರಸ್ತೆಯಲ್ಲಿ ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್‌ ಮೇಲಿನ ಶೂಟೌಟ್‌ ಪ್ರಕರಣದ ಬಳಿಕ ಎಚ್ಚೆತ್ತಿರುವ ಬೆಂಗಳೂರು ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌, ಈಗ ರೌಡಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಪಾತಕಿಗಳ ವಿರುದ್ಧ ಕಠಿಣ ಜಾರಿಗೊಳಿಸಲು ಆದೇಶಿಸಿದ್ದಾರೆ.
ಈ ಸೂಚನೆ ಹಿನ್ನೆಲೆಯಲ್ಲಿ ಆರ್ಥಿಕ ಮೂಲಗಳು ಹಾಗೂ ಪ್ರಸುತ್ತ ಜೀವ ಶೈಲಿನ ಸೇರಿದಂತೆ ರೌಡಿಶೀಟರ್‌'ಗಳ ಸಮಗ್ರ ಮಾಹಿತಿ ಕಲೆ ಹಾಕಲು ಸ್ಥಳೀಯ ಪೊಲೀಸರು ಮುಂದಾಗಿದ್ದು, ಈ ವರದಿ ಬಳಿಕ ರೌಡಿಶೀಟರ್‌ಗಳ ಮೇಲೆ ಗೂಂಡಾ ಕಾಯ್ದೆ ಪ್ರಯೋಗಿಸಿ ಬಂಧನಕ್ಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.
-suvarnanews



loading...

No comments