Breaking News

ಚಂದನವನದ ಚಂದದ ಜೋಡಿಯಿಂದ "ಊರ್ವಿ" ಟ್ರೈಲರ್ ಬಿಡುಗಡೆ


'ಲೂಸಿಯ' ಬೆಡಗಿ ಶೃತಿ ಹರಿಹರನ್, ಯೂ ಟರ್ನ್ ಪೋರಿ ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್ ಅವರ ಮುಖ್ಯ ಭೂಮಿಕೆಯಲ್ಲಿ ನವ ನಿರ್ದೇಶಕ ಪ್ರದೀಪ್ ವರ್ಮ ನಿರ್ದೇಶನವಿರುವ 'ಊರ್ವಿ' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ನವದಂಪತಿಗಳಾದ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಬಿಡುಗಡೆ ಮಾಡಿದ್ದಾರೆ.

ಒಂದು ಸಮಸ್ಯೆಯ ಮೇಲೆ ಮೂವರು ಮಹಿಳೆಯರು ಸಿಡಿದೇಳುವ ಮಹಿಳಾ ಪ್ರಧಾನ ಸಿನಿಮಾ ಇದಾಗಿದೆ. ನಕಾರಾತ್ಮಕ ಪಾತ್ರದಲ್ಲಿ ಅಚ್ಯುತ್ ಕುಮಾರ್ ಅಭಿನಯಿಸಿದ್ದಾರೆ. ಈ ಹಿಂದೆ ಟೀಸರ್ ಮೂಲಕವೇ ತೀವ್ರಾಸಕ್ತಿ ಮೂಡಿಸಿದ್ದ ಚಿತ್ರ, ಈಗ ಟ್ರೈಲರ್ ಮೂಲಕ ಮತ್ತಷ್ಟು ಕುತೂಹಲ ಕೆರಳಿಸಿದೆ.

ಸದ್ಯದಲ್ಲೆ ಚಿತ್ರ ಬಿಡುಗಡೆಯಾಗಲಿದ್ದು ನಿರ್ದಿಷ್ಟವಾದ ದಿನಾಂಕವನ್ನು ಚಿತ್ರತಂಡ ಇನ್ನೂ ನಿಗದಿಪಡಿಸಿಲ್ಲ.

loading...

No comments