Breaking News

ಕೊಂಕಣಿ ಭಾಷಿಗರ ಜೀವನ ಶೈಲಿ ಬಿಂಬಿಸೋ ವಿಭಿನ್ನ ಜಗತ್ತು ಸೃಷ್ಠಿ

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಹಮ್ಮಿ ಕೊಂಡಿರುವ ಮೂರು ದಿನಗಳ ಸಂಭ್ರಮದ ಕೊಂಕಣಿ ಲೋಕೋತ್ಸವ ಕಾರ್ಯಕ್ರಮದ ಅಂಗಣದಲ್ಲಿ ಹರಿದು ಬರುತ್ತಿರುವ ಜನಸಾಗರದ ನಡುವೆ ಎಲ್ಲರ ಗಮನ ಅಲ್ಲಿನ ಶಿಸ್ತು ಸುವ್ಯವಸ್ಥೆಯತ್ತ ಸೆಳೆಯಲ್ಪಡುತ್ತಿದೆ. ಪುರಭವನದ ಎದುರು ವ್ಯವಸ್ಥೆ ಮಾಡಲಾಗಿರುವ ಕೊಂಕಣಿ ಸಂತೆಯಲ್ಲಿ ಹಲವಾರು ಅಂಗಡಿ ಮುಗ್ಗಟ್ಟುಗಳಲ್ಲಿ ಕೊಂಕಣಿ ಬದುಕಿನ ಹಲವಾರು ವಸ್ತು ವಿಷಯಗಳನ್ನು ವಿಕ್ರಯ ಮಾಡಲಾಗುತ್ತಿದೆ. ಕೊಂಕಣಿ ಪಾರಂಪರಿಕ ಪಂಗಡಗಳು ಉತ್ಪಾದಿಸುವ ಕಾಡುತ್ಪತ್ತಿ ಹಾಗೂ ಇತರ ಪಾರಂಪರಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಭರದಿಂದ ಸಾಗುತ್ತಿದೆ.
loading...

No comments