Breaking News

ಅಂಧರ ಟಿ-20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಸನ್ಮಾನ ಮಾಡಿದ ಯಡ್ಡಿಯೂರಪ್ಪ.

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಂದರೆ ಟಿ-20 ವಿಶ್ವಕಪ್ ಟೂರ್ನಿಯ ಪೈನಲ್ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಜಯಗಳಿಸಿತ್ತು.

ದೃಷ್ಟಿ ವಂಚಿತರಾದರೂ ದೃಡ ವಿಶ್ವಾಸದಿಂದ ವಿಶ್ವಕಪ್ ಜಯಿಸುವ ಮೂಲಕ ಮಹತ್ತರ ಸಾಧನೆ ಮಾಡಿದ ಅ೦ಧರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ವಿಜೇತ ಭಾರತ ತ೦ಡವನ್ನು ಇಂದು ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಯಡ್ಡಿಯೂರಪ್ಪನವರು ತಮ್ಮ ಮನೆಗೆ ಕರೆಯಿಸಿ ಆತ್ಮೀಯವಾಗಿ ಸತ್ಕರಿಸಿ ಅಭಿನ೦ದಿಸಿದರು. ತಮ್ಮ ನೂನ್ಯತೆಗಳನ್ನು ಗೆದ್ದು ಮಹಾಸಾಧನೆ ಮಾಡಿರುವ ತ೦ಡದ ಪ್ರತಿಯೊಬ್ಬ ಆಟಗಾರ ಇಡೀ ದೇಶಕ್ಕೆ ಸ್ಪೂರ್ತಿದಾಯಕರಾಗಿದ್ದಾರೆ ಎ೦ದು ಅವರು ಈ ಸಂದರ್ಭದಲ್ಲಿ ಹೇಳಿದರು.

loading...

No comments