ಈ ರಾಣಿಯ ಸೋಶಿಯಲ್ ಮೀಡಿಯಾ ಖಾತೆ ನಿರ್ವಹಣೆ ಮಾಡಲು ಜನ ಬೇಕಾಗಿದ್ದಾರೆ.
ಲಂಡನ್ : ಹಗಲು ರಾತ್ರಿ ಕಷ್ಟಪಟ್ಟು ದುಡಿದರು ಕೆಲವರ ತಿಂಗಳ ಸಂಬಳ ನಾಲ್ಕಂಕಿ ದಾಟಲ್ಲ. ಅದೇ ಕುಳಿತಲ್ಲಿಯೇ ಕೆಲಸ, ಲಕ್ಷಾಂತರ ಸಂಬಳ ಕೈ ಸೇರಿದರೆ ಹೇಗಿರಬಹುದು.? ಹೌದು ಅಂತಹದೊಂದು ಕೆಲಸ ಖಾಲಿ ಇದೆ.
ಲಂಡನ್ನಿನಲ್ಲಿರುವ ರಾಣಿ ಎಲಿಜಬೆತ್'ರ ಟ್ವಿಟ್ಟರ್ ಖಾತೆಯನ್ನು ನಿರ್ವಹಣೆ ಮಾಡಲು ಬಕ್ಕಿಂಗ್ಹ್ಯಾಂ ಅರಮನೆ ಅರ್ಜಿ ಆಹ್ವಾನಿಸಿದೆ. 27ಲಕ್ಷಕ್ಕೂ ಅಧಿಕ ಮಂದಿ ಹಿಂಬಾಲಕರು ಇರುವ ಈ ಖಾತೆಯನ್ನು ನಿರ್ವಹಣೆ ಮಾಡುವ ವ್ಯಕ್ತಿಗೆ ವಾರ್ಷಿಕ ವೇತನ 30 ಸಾವಿರ ಪೌಂಡ್ (25ಲಕ್ಷ ರೂಪಾಯಿ) ವೇತನ ನಿಗದಿ ಪಡಿಸಿದೆ. ಈ ಬಗ್ಗೆ ರಾಜಮನೆತನದ ಅಧಿಕೃತ ವೆಬ್ಸೈಟ್ ನಲ್ಲಿ ಜಾಹೀರಾತು ನೀಡಲಾಗಿದೆ.
ಅರ್ಜಿ ಸಲ್ಲಿಸುವವರು ಸಾಮಾಜಿಕ ಜಾಲತಾಣಗಳಲ್ಲಿ ಪರಿಣಿತಿ ಹೊಂದಿರಬೇಕು, ವೀಡಿಯೋ ಹಾಗೂ ಫೋಟೋಗಳ ಎಡಿಟಿಂಗ್ ಗೊತ್ತಿರಬೇಕು. ಅರಮನೆಯಲ್ಲಿ ಜರುಗುವ ಪ್ರತಿಯೊಂದು ಕಾರ್ಯಕ್ರಮಗಳ ಬಗ್ಗೆ , ಅರಮನೆಯಲ್ಲಿ ಸಾರ್ವಜನಿಕರಿಗೆ ನೀಡಲಾಗುವ ಸೇವೆಗಳ ಸಂಪೂರ್ಣ ಮಾಹಿತಿಯನ್ನು ಟ್ವಿಟರ್, ಫೇಸ್ಬುಕ್, ಯೂಟ್ಯೂಬ್ ಮೂಲಕ ಜಗತ್ತಿಗೆ ತಿಳಿಸುತ್ತಿರಬೇಕು ಎಂದು ವಿವರಣೆ ನೀಡಿದೆ.
loading...
No comments