Breaking News

ಕಂಬಳ ಪರ ಮಸೂದೆ ವಿಧಾನಸಭೆಯಲ್ಲಿ ಪಾಸ್, ಹೋರಾಟಗಾರರಿಗೆ ಜಯ.

ಬೆಂಗಳೂರು : ಕಂಬಳ ಪರ ರಾಜ್ಯಾದ್ಯಂತ ನಡೆಯುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ. ವಿಧಾನಸಭೆ ಅಧಿವೇಶನದಲ್ಲಿ ಸೋಮವಾರ 'ಪ್ರಾಣಿ ಹಿಂಸೆ ತಡೆ ತಿದ್ದುಪಡಿ ವಿಧೇಯಕ-2017' ಅಂಗೀಕಾರವಾಗುವ ಮೂಲಕ ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಕಂಬಳದ ಜೊತೆಗೆ ಎತ್ತಿನ ಓಟ ಹಾಗೂ ಎತ್ತಿನ ಗಾಡಿ ಓಟಕ್ಕೂ ಸರ್ಕಾರ ಕಾನೂನಾತ್ಮಕವಾಗಿ ಅನುವು ಮಾಡಿಕೊಟ್ಟಿದೆ.
ಪಶುಸಂಗೋಪನ ಸಚಿವ ಎ ಮಂಜು ಮನವಿಗೆ ವಿಧಾನಸಭೆಯಲ್ಲಿ ಎಲ್ಲಾ ಸದಸ್ಯರು ಪಕ್ಷಾತೀತವಾಗಿ ಒಕ್ಕೊರಲಿನಿಂದ ಸ್ಪಂದಿಸಿದರು. ಈ ಮೂಲಕ 'ಪ್ರಾಣಿ ಹಿಂಸೆ ತಡೆ ತಿದ್ದುಪಡಿ ವಿಧೇಯಕ-2017' ಮಸೂಧೆಗೆ ಸದನದಲ್ಲಿ ಅಂಗೀಕಾರ ಸಿಕ್ಕಿತು. ಇದಕ್ಕಿನ್ನು ರಾಜ್ಯಪಾಲರ ಅಂಕಿತ ಬೀಳಬೇಕಾಗಿದೆ.
ತಮಿಳುನಾಡಿನ ಜಲ್ಲಿಕಟ್ಟು ಹೋರಾಟದ ಬೆನ್ನಲ್ಲೇ ಕರ್ನಾಟಕದಲ್ಲೂ ಕಂಬಳ ಹೋರಾಟ ಚುರುಕುಗೊಂಡಿತ್ತು. ಕರ್ನಾಟಕ ಸರ್ಕಾರ ಕಾನೂನಿಗೆ ತಿದ್ದುಪಡಿ ತಂದು ಕಂಬಳ ನಡೆಸಲು ಅನುವು ಮಾಡಿಕೊಡುವುದಾಗಿ ಭರವಸೆ ನೀಡಿತ್ತು. ಅದರಂತೆ ವಿಧಾನಸಭೆಯಲ್ಲಿ ಫೆಬ್ರವರಿ 10ರಂದು ಪಶು ಸಂಗೋಪನ ಸಚಿವ ಕೆ.ಮಂಜು ವಿಧೇಯಕವನ್ನು ಮಂಡಿಸಿದ್ದರು. ಈಗ ವಿಧೇಯಕಕ್ಕೆ ಸದನದಲ್ಲಿ ಪಕ್ಷಾತೀತವಾಗಿ ಬೆಂಬಲ ಸಿಗುವ ಮೂಲಕ ಅಂಗೀಕಾರವಾಗಿದೆ.
loading...

No comments