ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ.
ಹೈದ್ರಾಬಾದ್ : ಬಾಂಗ್ಲಾದೇಶ ವಿರುದ್ಧದ ಏಕಮಾತ್ರ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಗಳಿಸಿದೆ. ಭಾರತ ನೀಡಿದ 459 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಬಾಂಗ್ಲಾ 250ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಈ ಮೂಲಕ 208ರನ್ ಗಳಿಂದ ಭಾರತ ಗೆಲುವು ಸಾಧಿಸಿದೆ.
ಭಾರತದ ಪರ ರವೀಂದ್ರ ಜಡೇಜ ಹಾಗೂ ಆರ್ ಅಶ್ವಿನ್ ತಲಾ 4ವಿಕೆಟ್ ಪಡೆದರೆ ಇಶಾಂತ್ ಶರ್ಮಾ 2ವಿಕೆಟ್ ಪಡೆದರು. ಬಾಂಗ್ಲಾ ಪರ ಮುಹಮದುಲ್ಲಾ 64ರನ್, ಸೌಮ್ಯ ಸರ್ಕಾರ್ 42ರನ್ ಬಾರಿಸಿದ್ದು ಬಿಟ್ಟರೆ ಬೇರೆಲ್ಲಾ ಆಟಗಾರನು ಭಾರತದ ಸ್ಪಿನ್ ಬೌಲಿಂಗ್ ಎದುರು ನೆಲಕಚ್ಚಿದರು. ಈ ಗೆಲುವಿನ ಮೂಲಕ ಭಾರತ ಟೆಸ್ಟ್ ಕ್ರಿಕೆಟ್ ನಲ್ಲಿ ದಾಖಲೆಯ ಸತತ 19ಗೆಲುವು ದಾಖಲಿಸಿ ತಮ್ಮ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ.
ಸಂಕ್ಷಿಪ್ತ ಸ್ಕೋರ್
ಭಾರತ
ಮೊದಲ ಇನಿಂಗ್ಸ್ನ 166 ಓವರ್ಗಳಲ್ಲಿ 6 ವಿಕೆಟ್ಗೆ 687ರನ್ ಗಳಿಸಿ ಡಿಕ್ಲೇರ್.
ಎರಡನೇ ಇನ್ನಿಂಗ್ಸ್: 29 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 ಡಿಕ್ಲೇರ್
ಮೊದಲ ಇನಿಂಗ್ಸ್ನ 166 ಓವರ್ಗಳಲ್ಲಿ 6 ವಿಕೆಟ್ಗೆ 687ರನ್ ಗಳಿಸಿ ಡಿಕ್ಲೇರ್.
ಎರಡನೇ ಇನ್ನಿಂಗ್ಸ್: 29 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 ಡಿಕ್ಲೇರ್
ಬಾಂಗ್ಲಾದೇಶ
ಮೊದಲ ಇನಿಂಗ್ಸ್ನ 127.5 ಓವರ್ಗಳಲ್ಲಿ 388ರನ್ನಿಗೆ ಆಲೌಟ್
ಎರಡನೇ ಇನ್ನಿಂಗ್ಸ್ : 103.3 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 250
ಮೊದಲ ಇನಿಂಗ್ಸ್ನ 127.5 ಓವರ್ಗಳಲ್ಲಿ 388ರನ್ನಿಗೆ ಆಲೌಟ್
ಎರಡನೇ ಇನ್ನಿಂಗ್ಸ್ : 103.3 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 250
ಫಲಿತಾಂಶ
ಭಾರತಕ್ಕೆ 208 ರನ್ ಗಳಿಂದ ಜಯ.
loading...
No comments