ಕೇರಳದಲ್ಲಿ ಬಿಜೆಪಿ ಯುವಮೋರ್ಚಾ ನಾಯಕನ ಬರ್ಬರ ಹತ್ಯೆ.
ಕೇರಳ : ಕೇರಳದಲ್ಲಿ ಬಿಜೆಪಿ - ಸಿಪಿಎಂ ಪಕ್ಷಗಳ ಮದ್ಯೆ ಇರುವ ದ್ವೇಷದ ಕಿಚ್ಚು ಕಮ್ಮಿಯಾಗುವಂತೆ ಕಾಣುತ್ತಿಲ್ಲ. ಭಾನುವರ ಸಿಪಿಎಮ್ ಕಾರ್ಯಕರ್ತರು 20ರ ಹರೆಯದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.
ತ್ರಿಶೂರ್ ನ ಪೊಟ್ಟೂರು ಎಂಬಲ್ಲಿನ ಕೊಕ್ಕಲನಗರದ ದೇವಸ್ಥಾನದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪ್ರಾರಂಭವಾದ ಜಗಳ ಬಿಜೆಪಿ ಕಾರ್ಯಕರ್ತ 20ರ ಹರೆಯದ ನಿರ್ಮಲ್ ಎಂಬಾತನ ಕೊಲೆಯಲ್ಲಿ ಅಂತ್ಯವಾಗಿದೆ. ಧಾಳಿಯಲ್ಲಿ ಥಾಮಸ್ ಎಂಬಾತ ಗಾಯಗೊಂಡಿದ್ದಾನೆ.
ಬಿಜೆಪಿ ನಾಯಕರು ಈ ಹತ್ಯೆಯನ್ನು ಸಿಪಿಎಮ್ ರಾಜಕೀಯ ಪ್ರೇರಿತವಾಗಿ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೋಲೀಸರು ತನಿಖೆ ಕೈಗೊಂಡಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕುಮ್ಮನಮ್ ರಾಜಶೇಖರನ್ ಬಿಜೆಪಿ ಯುವಮೋರ್ಚಾ ನಾಯಕ ನಿರ್ಮಲ್ ಹತ್ಯೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.
loading...
No comments