ಕುಡಿತದ ಮತ್ತಿನಲ್ಲಿ ಗೆಳೆಯನ ಮೂಗು ಕೊಯ್ದ
ಮಂಗಳೂರು, ತಾಯಿಗೆ ಬೈದನೆಂಬ ಕಾರಣಕ್ಕೆ ಇಬ್ಬರು ಸ್ನೇಹಿತರ ನಡುವಿನ ಕಲಹದಲ್ಲಿ ಓರ್ವ ಮತ್ತೋರ್ವ ಗೆಳೆಯನ ಮೂಗು, ತುಟಿ ಕುಯ್ದು ಹಾಕಿದ ಘಟನೆ ನಗರದ ನಾಗುರಿನಲ್ಲಿ ನಿನ್ನೆ ನಡೆದಿದೆ. ಕಂಕನಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಆರೋಪಿಯನ್ನು ನಾಗುರಿಯ ಕೃತಿರಾಜ್ (೨೫) ಎಂದು ಹೆಸರಿಸಲಾಗಿದ್ದು, ಈತನನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ. ಮೊಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಾಸನ ಮೂಲದ ಮಧು (೨೧) ಹಾಗೂ ಸ್ಟಿಕ್ಕರ್ ಕಟ್ಟಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೃತಿರಾಜ್ ಗೆಳೆಯರಾಗಿದ್ದು, ನಿನ್ನೆ ಮಧ್ಯಾಹ್ನ ೨ರಿಂದ ನಾಲ್ಕು ಗಂಟೆಯವರೆಗೆ ಬಾರ್ ಕುಳಿತು ಮದ್ಯಪಾನ ಮಾಡಿ, ಹೊರಬಂದಿದ್ದರು. ಬಳಿಕ ಇದೇ ಮತ್ತಿನಲ್ಲಿ ಅವರು ಗಲಾಟೆ ಮಾಡಿಕೊಂಡಿದ್ದು, ಈ ವೇಳೆ ಮಧು ಗೆಳೆಯ ಕೃತಿರಾಜ್‌ನ ತಾಯಿಗೆ ಅವಾಚ್ಯವಾಗಿ ಬೈದಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಕೃತಿರಾಜ್ ತನ್ನ ಕೈಯಲ್ಲಿದ್ದ ಸ್ಟಿಕ್ಕರ್ ಕಟ್ಟಿಂಗ್ ಬ್ಲೇಡ್ ಅನ್ನು ಬೀಸಿದ್ದು, ಈ ವೇಳೆ ಮಧುನ ಮೂಗು ಹಾಗೂ ತುಟಿಗೆ ಕುಯ್ದು ಹೋಗಿದೆ. ಕೂಡಲೇ ಆತನನನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
loading...
No comments