Breaking News

ಹಿಂದೂಗಳು ಎಂದಿಗೂ ಮತಾಂತರ ಕಾರ್ಯಕ್ಕೆ ಕೈ ಹಾಕಿಲ್ಲ ಹಾಗಾಗಿ ಅಲ್ಪಸಂಖ್ಯಾತರಾಗುತ್ತಿದ್ದಾರೆ.

ನವದೆಹಲಿ : ಹಿಂದೂಗಳು ಇತರ ಧರ್ಮೀಯರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಲು ಎಂದಿಗೂ ಯತ್ನಿಸುವುದಿಲ್ಲ. ಹಾಗಾಗಿ ಹಿಂದೂರಾಷ್ಟ್ರದಲ್ಲಿಯೇ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಕಿರಣ್ ರಿಜಿಜು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬೇರೆ ಯಾವ ದೇಶಗಲ್ಲೂ ಅಲ್ಪಸಂಖ್ಯಾತರು ಇಷ್ಟೊಂದು ಪ್ರವರ್ಧಮಾನಕ್ಕೆ ಬರುತ್ತಿಲ್ಲ, ಭಾರತದಲ್ಲಿ ಮಾತ್ರ ಇತರ ಧರ್ಮೀಯರು ಹಿಂದೂಗಳನ್ನು ತಮ್ಮ ಧರ್ಮಕ್ಕೆ ಮತಾಂತರ ಮಾಡುವ ಮೂಲಕ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿ ಅರುಣಾಚಲ ಪ್ರದೇಶವನ್ನು ಹಿಂದೂ ರಾಜ್ಯವಾಗಿ ಪರಿವರ್ತಿಸುತ್ತಿದೆ ಎಂಬ ಕಾಂಗ್ರೆಸ್ ಹೇಳಿಕೆಗೆ ರಿಜಿಜು ಈ ರೀತಿ ಹೇಳಿಕೆ ನೀಡಿದ್ದಾರೆ.

ರಿಜಿಜು ಅವರು ಮಾಡಿರುವ ಟ್ವೀಟ್ :
loading...

No comments