"ಹೈಕಮಾಂಡ್ಗೆ ಮಾಮೂಲಿ" ಯಡಿಯೂರಪ್ಪ ಬಿಟ್ಟ ಬಾಣವನ್ನೇ ತಿರುಗಿಸಿ ಬಿಟ್ಟ ಕಾಂಗ್ರೆಸ್
ಅನಂತ್ ಕುಮಾರ್ - ಯಡಿಯೂರಪ್ಪ ನಡುವಿನ ಸಂಭಾಷಣೆಯ ಸಿಡಿ ಬಿಡುಗಡೆ ಮಾಡಿದ ಕಾಂಗ್ರೆಸ್
ಬೆಂಗಳೂರು :ಹೈಕಮಾಂಡ್ಗೆ ನೀಡುವ ಮಾಮೂಲಿ (ಕಪ್ಪ) ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಆರೋಪ ಪ್ರತ್ಯಾರೋಪ ತಾರಕಕ್ಕೆರಿದೆ. ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರು ಅನಂತ್ ಕುಮಾರ್ - ಯಡಿಯೂರಪ್ಪ ನಡುವಿನ ಸಂಭಾಷಣೆಯ ಸಿಡಿ ಬಿಡುಗಡೆ ಮಾಡಿದ್ದಾರೆ.
ಸಿಡಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜತೆ ಅನಂತ್ ಕುಮಾರ್ ಜತೆ ಮಾತನಾಡಿರುವ ಫೋನ್ ಸಂಭಾಷನೆಯ ರೆಕಾರ್ಡಿಂಗ್ ಇದ್ದು ಇದರಲ್ಲಿ ಬಿಜೆಪಿ ಹೈ ಕಮಾಂಡ್ಗೆ ಹಣ ನೀಡುವ ಬಗ್ಗೆ ಪ್ರಸ್ತಾವನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದು .ಯಡಿಯೂರಪ್ಪ ಆಡಳಿತಾವಧಿಯಲ್ಲಿ ಹಗಲು ದರೋಡೆ ಮಾಡಲಾಗಿದೆ. ಇದಕ್ಕೆ ಸಾಕ್ಷ್ಯಗಳಿವೆ ಎಂದು ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ
loading...
No comments