Breaking News

ಕಾಲೇಜು ಆಡಳಿತ ಮಂಡಳಿ ಮಧ್ಯ ಪ್ರವೇಶದಿಂದ ಸ್ಕಾರ್ಫ್ ವಿವಾದ ಅಂತ್ಯ.

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶಿರವಸ್ತ್ರ ಧರಿಸುವ ಕುರಿತು ಮುಸ್ಲಿಂ ವಿದ್ಯಾರ್ಥಿನಿಯರ ಮಧ್ಯೆ ಇದ್ದ ವಿವಾದ ಕಾಲೇಜು ಆಡಳಿತ ಮಂಡಳಿ ಮಧ್ಯಪ್ರವೇಶದಿಂದ ಸೌಹಾರ್ದಯುತವಾಗಿ ಬಗೆಹರಿದಿದೆ. ಕಾಲೇಜಿನಲ್ಲಿ ಜಾರಿಗೆ ತಂದಿರುವ ವಸ್ತ್ರಸಂಹಿತೆ ಪ್ರಕಾರದಲ್ಲಿ ಆಡಳಿತ ಮಂಡಳಿ ನಿಗದಿಪಡಿಸಿರುವ ನಿರ್ದಿಷ್ಟ ಬಣ್ಣದ ಶಿರವಸ್ತ್ರ ಧರಿಸುವಂತೆ ಆದೇಶಿಸಿದೆ. ಮಾರ್ಚ್2ರಿಂದ ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಲಾಗಿದೆ.
ಕಾಲೇಜಿನ ವಸ್ತ್ರಸಂಹಿತೆ ಪ್ರಕಾರ ಈ ಶೈಕ್ಷಣಿಕ ವರ್ಷದಿಂದ ತೆಳುನೀಲಿ ಬಣ್ಣದ ಅಂಗಿ ಹಾಗೂ ಕಡುನೀಲಿ ಬಣ್ಣದ ಪ್ಯಾಂಟ್ ಮತ್ತು ವಿದ್ಯಾರ್ಥಿನಿಯರಿಗೆ ಕಡು ನೀಲಿ ಬಣ್ಣದ ಪ್ಯಾಂಟ್, ತೆಳುನೀಲಿ ಬಣ್ಣದ ಗೆರೆಯುಳ್ಳ ಟಾಪ್, ಶಾಲು ಹಾಗೂ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅದೇ ಬಣ್ಣದ ಸ್ಕಾರ್ಫ್ ನಿಗದಿಪಡಿಸಿತ್ತು.
ಆದರೆ ವಿದ್ಯಾರ್ಥಿನಿಯರು ಧರಿಸಿಬರುತ್ತಿದ್ದ ಸ್ಕಾರ್ಫ್ ಗೆ ಅದೇ ಸಮುದಾಯದ ಕೆಲ ವಿದ್ಯಾರ್ಥಿನಿಯರು ಆಕ್ಷೇಪ ವ್ಯಕ್ತಪಡಿಸಿದ್ದರು.ಈಗ ವಿವಾದ ಕಾಲೇಜು ಆಡಳಿತ ಮಂಡಳಿ ಮಧ್ಯಪ್ರವೇಶದಿಂದ ಸೌಹಾರ್ದಯುತವಾಗಿ ಬಗೆಹರಿದಿದೆ. ಕಾಲೇಜಿನಲ್ಲಿ ಜಾರಿಗೆ ತಂದಿರುವ ವಸ್ತ್ರಸಂಹಿತೆ ಪ್ರಕಾರದಲ್ಲಿ ಆಡಳಿತ ಮಂಡಳಿ ನಿಗದಿಪಡಿಸಿರುವ ನಿರ್ದಿಷ್ಟ ಬಣ್ಣದ ಶಿರವಸ್ತ್ರ ಧರಿಸುವಂತೆ ಆದೇಶಿಸಿದೆ. ಮಾರ್ಚ್2ರಿಂದ ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಲಾಗಿದೆ.
loading...

No comments