Breaking News

ಮಣಿಪುರ ಬಿಜೆಪಿ ರ್ಯಾಲಿ ನಡೆಯುವಲ್ಲಿ ಬಾಂಬ್‍ಗಳು ಪತ್ತೆ..!ಇಂಫಾಲ್: ಮಣಿಪುರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ನಾಳೆ ಭಾಷಣ ಮಾಡಲಿದ್ದು , ಅದಕ್ಕೆ ಮುನ್ನವೇ ರಾಜಧಾನಿ ಇಂಫಾಲದಲ್ಲಿ ಹ್ಯಾಂಡ್ ಗ್ರೇನೈಡ್ ಮತ್ತು ಬಾಂಬ್‍ಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.   ಬಿಜೆಪಿ ಅಭ್ಯರ್ಥಿ ಸೊಯಿಬಂಬ್ ಸುಭಾಷ್‍ಚಂದ್ರ ಅವರ ನಿವಾಸದ ಪ್ರವೇಶದ್ವಾರದ ಬಳಿ ಚೀನಿ ತಯಾರಿಕೆಯ ಹ್ಯಾಂಡ್ ಗ್ರೇನೈಡ್ ಮತ್ತು ಬಿಜೆಪಿ ಮುಖಂಡ ಸುನೀಲ್ ಅವರ ನಿವಾಸದ ಬಳಿ ಮತ್ತೊಂದು ಬಾಂಬ್ ಪತ್ತೆಯಾಗಿದೆ. ಮೋದಿಯವರ ಭೇಟಿ ವಿರೋಧಿಸಿ ನಾಳೆ ಮಣಿಪುರ ಬಂದ್‍ಗೆ 6 ಬಂಡುಕೋರ ಸಮೂಹದ ಒಕ್ಕೂಟವು ಕರೆ ನೀಡಿರುವ ಬೆನ್ನಲ್ಲೇ ಈ ಬಾಂಬ್‍ಗಳು ಪತ್ತೆಯಾಗಿದ್ದು , ಆತಂಕಕ್ಕೆ ಕಾರಣವಾಗಿದೆ.
loading...

No comments