ಪಡುಬಿದ್ರಿ ಕೋಮು ಸಂಘರ್ಷ ಹಿಂದೂ ಸಂಘಟನೆ ಯುವಕರಿಗೆ ಬಿಡುಗಡೆ ಭಾಗ್ಯ
ಪಡುಬಿದ್ರಿ : ಅಕ್ಕಿಸಾಗಿಸುತ್ತಿದ್ದ ವಾಹನ ಚಾಲಕ-ನಿರ್ವಾಹಕ ಯುವಕರಿಗೆ ಮುಸ್ಲಿಂ ಯುವಕರು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಡೆದ ಕೋಮು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿ ಬಲಪಂಥೀಯ ಸಂಘಟನೆಯ 17 ಮಂದಿಯನ್ನು ಬಂಧಿಸಿದ್ದು, ಇದೀಗ ವಿಚಾರಣಾ ಆರೋಪಿಗಳಿಗೆ ಬಿಡುಗಡೆ ಭಾಗ್ಯ ಲಭಿಸಿದೆ.
ಭಾನುವಾರ ರಾತ್ರಿ ಶಂಕಿತ ಆರೋಪಿಗಳದ ಪಲಿಮಾರು, ಎಲ್ಲೂರು, ಪೆಜತ್ತಕಟ್ಟೆ, ಸಾಂತೂರು, ಮುಲ್ಕಿ, ಇನ್ನಾ, ಕಂಚಿನಡ್ಕ ಹಾಗೂ ಪಣಿಯೈರು ಪ್ರದೇಶದ ಆರೋಪಿಗಳಾದ ರಾಯೇಶ್ ಪೈ, ಕಿರಣ್, ಪ್ರಕಾಶ್, ಸುಧೀರ್ ಪೂಜಾರಿ, ಪ್ರಶಾಂತ್ ಕುಲಾಲ್, ಅಕ್ಷಿತ್, ಸುರೇಶ್, ಗಣೇಶ್ ಪೂಜಾರಿ, ಸುನೀಲ್, ಸುಖೇಶ್, ಕೀರ್ತನ್, ಶರತರಾಜ್, ಕಾರ್ತಿಕ್, ಗಿರೀಶ್ ಪುತ್ರನ್, ಸುರೇಂದ್ರ ಹಾಗೂ ಹರೀಶ್ ಇವರುಗಳನ್ನು ಭಾನುವಾರ ರಾತ್ರಿ ನ್ಯಾಯಾಧೀಶರ ಮನೆಗೆ ಹಾಜರು ಪಡಿಸಿದಾಗ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಈ ಆರೋಪಿಗಳಿಗೆ ಬಳ್ಳಾರಿ ಜೈಲು ಎನ್ನಲಾಗಿತ್ತಾದರೂ ಮಧ್ಯಾಹ್ನ ನಡೆದ ವಾದ ವಿವಾದಗಳನ್ನು ಪರಿಶೀಲಿಸಿ ಬೇಲ್ ಜಾರಿ ಮಾಡುವ ಮೂಲಕ ಆರೋಪಿಗಳಿಗೆ ಬಿಡುಗಡೆ ಭಾಗ್ಯ ದೊರಕಿದೆ. ಉಳಿದಂತೆ ಇನ್ನೂ 25 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು ಇವರ ವಿರುದ್ಧ ದೊಂಬಿ, ಮತೀಯ ಭಾವನೆಗೆ ದಕ್ಕೆ, ಸೊತ್ತು ನಾಶ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿ, ಮೈಗೆ ಕೈ ಹಾಕಿ ತಳ್ಳಿದ ಬೆದರಿಕೆ ಹಾಕಿದ ಬಗ್ಗೆ ಪ್ರಕರಣ ದಾಖಲಾಗಿದೆ.
loading...
No comments