Breaking News

ಕ್ಯಾನ್ಸರ್‌ಗೆ ರಾಮಬಾಣ ದ್ರಾಕ್ಷಿ ಹಣ್ಣಿನ ಬೀಜ



ದ್ರಾಕ್ಷಿ ಹಣ್ಣಿನ ಬೀಜದ ಸತ್ವವು ತಲೆ ಮತ್ತು ಕತ್ತಿಗೆ ಎಲುಬಿನ ಕೋಶ ಕಾರ್ಸಿನೋಮಾ ಕೋಶಗಳನ್ನು ಆರೋಗ್ಯವಂತ ಕೋಶಗಳಿಗೆ ಹಾನಿಯಾಗದಂತೆ ಅವುಗಳನ್ನು ಕೊಲ್ಲುತ್ತದೆಂದು ಭಾರತೀಯ ಮೂಲದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇವರು ತಮ್ಮ ಪ್ರಯೋಗವನ್ನು ಇಲಿಯ ಮಾದರಿಗಳಲ್ಲಿ ಪ್ರಯೋಗಿಸಿ ಸಂಶೋಧನೆ ನಡೆಸಿದ್ದಾರೆ.

ಅಮೇರಿಕಾದಲ್ಲಿ ಹತ್ತಿರ ಹತ್ತಿರ 12,000 
ದಷ್ಟು ಜನರು ತಲೆ ಹಾಗೂ ಕುತ್ತಿಗೆ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದು ಈ ವರ್ಷ ಸಾವಿನ ಸಂಖ್ಯೆಯು ಅರ್ಧ ಮಿಲಿಯನ್ ಅನ್ನು ದಾಟಿದೆ. 

ಈ ರೋಗವು ದೇಹದ ಆರೋಗ್ಯವಂತ ಕೋಶಗಳ ಹೆಚ್ಚಿನ ಭಾಗವನ್ನು 
ಆಕ್ರಮಿಸಿದ್ದುಅವುಗಳನ್ನು ಹಾನಿಗೊಳಪಡಿಸುವ ಶಕ್ತಿಯನ್ನು ಇವುಗಳು ಪಡೆದುಕೊಂಡಿದೆ. "ಇದೊಂದು ನಾಟಕೀಯ ಪರಿಣಾಮವಾಗಿದೆ ಎಂದು ಕೊಲೆರಾಡೊ ಕ್ಯಾನ್ಸರ್ ಸಂಸ್ಥೆಯ ಸಂಶೋಧಕ ರಾಜೇಶ್ ಅಗರ್‌ವಾಲ್ ತಿಳಿಸಿದ್ದಾರೆ. 

ಕ್ಯಾನ್ಸರ್ ಕೋಶಗಳು ಹೆಚ್ಚು ವೇಗವಾಗಿ 
ಬೆಳೆಯುವ ಕೋಶಗಳಾಗಿವೆ. ಅದೂ ಅಲ್ಲದೆ,ಸಾಮಾನ್ಯವಾಗಿ ಶೀಘ್ರ ಬೆಳವಣಿಗೆಯ ಕೋಶಗಳಾಗಿದ್ದುಅವುಗಳು ಬೆಳೆಯಲಾರದ ಸ್ಥಿತಿಗೆ ಬಂದಾಗ ಅವುಗಳು ಸಾಯುತ್ತವೆ ಎಂದವರು ತಿಳಿಸಿದ್ದಾರೆ. 

ದ್ರಾಕ್ಷಿ ಬೀಜದ ಸತ್ವವು ಅವು ಬೆಳೆಯಲಾಗದೆ ಇರುವಂತಹ ಸ್ಥಿತಿಯನ್ನು ಉಂಟುಮಾಡುವುದರಿಂದ ಅವುಗಳು ಬೆಳೆಯಲಾರವು. 


ನಿರ್ದಿಷ್ಟವಾಗಿ
ದ್ರಾಕ್ಷಿ ಬೀಜದ ಸತ್ವವು ಕ್ಯಾನ್ಸರ್ ಕೋಶಗಳಾದ ಡಿಎನ್‌ಎಗೆ ಹಾನಿ ಉಂಟು ಮಾಡುತ್ತವೆ ಮತ್ತು ಅದು ಪುನಃ ಸರಿಯಾಗುವಂತಹ ದಾರಿಯನ್ನು ನಿಲ್ಲಿಸುತ್ತದೆ.

ಇದರ ಬಗೆಗಿನ ಪ್ರಯೋಗವನ್ನು ಮೊದಲು ಇಲಿಗಳ ಮೇಲೆ ಮಾಡಲಾಗಿತ್ತು ಅವುಗಳ ಮೇಲೂ ಇದು ಉತ್ತಮ ಪರಿಣಾಮವನ್ನು ಬೀರಿತ್ತು. 


ದ್ರಾಕ್ಷಿ ಬೀಜದ ಸಾರವು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತಾದರೂ ಆರೋಗ್ಯವಂತ ಕೋಶಗಳಿಗೆ ಇದು ಯಾವುದೇ ರೀತಿಯ ಹಾನಿಯನ್ನುಂಟುಮಾಡುವುದಿಲ್ಲ. 


ಕ್ಯಾನ್ಸರ್ ಕೋಶಗಳ ದಾರಿಯನ್ನು ನಾವು ಮುಚ್ಚುವುದರಿಂದ ಅವುಗಳ ಬೆಳವಣಿಗೆ
ಕುಂಠಿತಗೊಳ್ಳುತ್ತವೆ ಆದರೆ ಆರೋಗ್ಯವಂತ ಕೋಶಗಳ ಬಗ್ಗೆ ಈ ರೀತಿಯ ನಂಬಿಕೆಸತ್ಯವಾಗಿರುವುದಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ. 
ದ್ರಾಕ್ಷಿ ಹಣ್ಣಿನ ಬೀಜ ಕ್ಯಾನ್ಸರ್ ಕೊಲೆರಾಡೊ ಕ್ಯಾನ್ಸರ್ ಸಂಸ್ಥೆ 
.

loading...

No comments