Breaking News

ಸಹಾಯದ ನೆಪದಲ್ಲಿ ಯುವತಿಗೆ ಬ್ಲಾಕ್ ಮೇಲ್, ಬಿಜೆಪಿ ಮುಖಂಡನ ವಿರುದ್ಧ ದೂರು.

ಮಂಗಳೂರು : ಸಹಾಯ ಮಾಡುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಹಣವನ್ನು ನೀಡಿ ನಂತರ ಬ್ಲಾಕ್ ಮೇಲ್ ಮಾಡುತ್ತಿರುವ ಕುರಿತು ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ಫ್ರಾಂಕ್ಲಿನ್ ಮೊಂತೇರೋ ವಿರುದ್ದ ಉರ್ವಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರಾಂಕ್ಲಿನ್ ಮೊಂತೇರೋ ಎಂಬಾತ ನನಗೆ 45,000 ರೂಪಾಯಿ ಹಣವನ್ನು ಸಾಲದ ರೂಪದಲ್ಲಿ ನೀಡಿ ಖಾಲಿ ಚೆಕ್ ಪಡೆದುಕೊಂಡಿದ್ದ. ಈಗ ಚಕ್ರಬಡ್ಡಿ ಸಮೇತ 80,000 ರೂ ಪಾವತಿಸಬೇಕೆಂದು ಬೇಡಿಕೆ ಇಟ್ಟಿದ್ದಾನೆನ್ನಲಾಗಿದೆ. ಹಣ ಕೊಡದಿದ್ದರೆ ಅತ್ಯಾಚಾರ ಮಾಡುತ್ತೇನೆ. ಸಂಘಟನೆ ಯುವಕರನ್ನು ಬಿಟ್ಟು ಮಾನಹಾನಿ ಮಾಡುತ್ತೇನೆ. ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸುಷ್ಮಾ ಎಂಬಾಕೆ ದೂರಿನಲ್ಲಿ ತಿಳಿಸಿದ್ದಾರೆ.
loading...

No comments