Breaking News

ಪುತ್ತೂರು ನಗರಸಭಾ ಉಪ ಚುನಾವಣೆ ನೆಲ ಕಚ್ಚಿದ ಕೈ


ಪುತ್ತೂರು : ಇಲ್ಲಿನ ನಗರಸಭೆಗೆ ನಡೆದ ಉಪಚುನಾವಣೆಯಲ್ಲಿ 6 ವಾರ್ಡುಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ. ಮೂರು ಸ್ಥಾನಗಳನ್ನು ಗೆದ್ದಿರುವುದು ಬಿಜೆಪಿಗೆ ಲಾಭವಾಗಿದೆ. ಈ ಹಿಂದೆ ಆರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರು. ಕ್ಷೇತ್ರದ ಆರು ಅಭ್ಯರ್ಥಿಗಳು ಈ ಹಿಂದೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾರಣ ಕಾಂಗ್ರೆಸ್ಸಿನಿಂದ ಉಚ್ಚಾಟನೆಗೊಂಡು ಸದಸ್ಯತ್ವ ಅನರ್ಹಗೊಂಡಿದ್ದರು. ಆ ಬಳಿಕ ಉಪಚುನಾವಣೆ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ವೇಳೆ ಮೂರು ಸ್ಥಾನಗಳನ್ನು ಬ್ಲಾಕ್ ಕಾಂಗ್ರೆಸ್ ಹಾಗೂ ಮೂರು ಸ್ಥಾನಗಳನ್ನು ಹೇಮನಾಥ ಶೆಟ್ಟಿ ಬಣ ಆಯ್ಕೆ ಮಾಡಿತ್ತು. ಹೇಮನಾಥ ಶೆಟ್ಟಿ ಬಣದ ಮೂರು ವಾರ್ಡುಗಳಲ್ಲಿ ಎರಡರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಬ್ಲಾಕ್ ಕಾಂಗ್ರೆಸ್ ಆಯ್ಕೆ ಮಾಡಿರುವ ಮೂವರು ಅಭ್ಯರ್ಥಿಗಳಲ್ಲಿ ಇಬ್ಬರಿಗೆ ಸೋಲಾಗಿದೆ.

6ನೇ ವಾರ್ಡಿನಲ್ಲಿ ಬಿಜೆಪಿಯ ಬಾಳಪ್ಪ ಕಾಂಗ್ರೆಸ್ಸಿನ ನಾಗೇಶ್ ಆಚಾರ್ಯರನ್ನು 521 ಮತಗಳ ಅಂತರದಿಂದ ಸೋಲಿಸಿದ್ದಾರೆ.

16ನೇ ವಾರ್ಡಿನಲ್ಲಿ ಬಿಜೆಪಿಯ ಶ್ಯಾಮಲಾ ಕರ್ಕುಂಜ ಅವರು ಕಾಂಗ್ರೆಸ್ ಬೆಂಬಲಿತ ಶ್ಯಾಮಲಾ ನೆಲ್ಲಿಗುಂಡಿ ಅವರನ್ನು 83 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

19ನೇ ವಾರ್ಡಿನಲ್ಲಿ ಕಾಂಗ್ರೆಸ್ಸಿನ ಸ್ವರ್ಣಲತಾ ಹೆಗ್ಡೆ ಬಿಜೆಪಿಯ ವೀಣಾರನ್ನು 36 ಮತಗಳ ಅಂತರದಿಂದ ಸೋಲಿಸಿದ್ದಾರೆ

21ನೇ ವಾರ್ಡಿನಲ್ಲಿ ಕಾಂಗ್ರೆಸ್ಸಿನ ಝೊಹರಾ ನಿಸಾರ್ ಅವರು ಬಿಜೆಪಿಯ ಅಹಲ್ಯಾರ ವಿರುದ್ಧ 83 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

22ನೇ ವಾರ್ಡಿನಲ್ಲಿ ಕಾಂಗ್ರೆಸ್ಸಿನ ಉಷಾ ಆಚಾರ್ಯ ಅವರು ಬಿಜೆಪಿಯ ವಿಜಯಲಕ್ಷ್ಮೀ ಅವರನ್ನು 109 ಮತಗಳ ಅಂತರದಿಂದ ಸೋಲಿಸಿದ್ದಾರೆ.

26ನೇ ವಾರ್ಡಿನಲ್ಲಿ ಬಿಜೆಪಿಯ ರಮೇಶ್ ರೈ ಅವರು ಕಾಂಗ್ರೆಸ್ಸಿನ ವೇಣುಗೋಪಾಲರನ್ನು 310 ಮತಗಳ ಅಂತರದಿಂದ ಸೋಲಿಸಿದ್ದಾರೆ.
-k ale
loading...

No comments