Breaking News

ನಮ್ಮಲ್ಲಿ ಯಾವುದೇ ಭಿನ್ನಾಾಭಿಪ್ರಾಾಯವಿಲ್ಲ ಕಾಂಗ್ರೆಸ್ ವಿರುದ್ಧ ಒಂದಾಗಿ ಹೋರಾಟ ನಡೆಸಲಿದ್ದೇವೆ : ಈಶ್ವರಪ್ಪಶಿವಮೊಗ್ಗ: ಪಕ್ಷದ ಮೂಲಕವೇ ಹಿಂದುಳಿದ ವರ್ಗಗಳ ಸಂಘಟನೆ ಮಾಡಲಾಗುವುದು. ಈ ಕುರಿತಂತೆ ನಮ್ಮಲ್ಲಿ ಯಾವುದೇ ಭಿನ್ನಾಾಭಿಪ್ರಾಾಯವಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೂಚನೆಯಂತೆ ರಾಯಣ್ಣ ಬ್ರಿಗೇಡ್ ರಾಜಕೀಯೇತರ ಚಟುವಟಿಕೆ ಸಂಘಟನೆಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಸ್ಪಷ್ಟಪಡಿಸಿದರು.
ಸಾವಿರ ಕೋಟಿ ರು. ಹೈಕಮಾಂಡಿಗೆ ಕೊಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಭಯಗೊಂಡಿದ್ದಾರೆ. ಕೃತಕ ಸಿಡಿ ಸೃಷ್ಟಿಸಿ, ರಾಜ್ಯದ ಪ್ರಜೆಗಳ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸಲಾಗುತ್ತಿದೆ. ಎರಡೂ ಪ್ರಕರಣಗಳ ತನಿಖೆಯಾಗಲಿ ಎಂದು ಸವಾಲು ಹಾಕಿದರು.
ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾವಿರ ಕೋಟಿ ರು. ಹಣವನ್ನು ಹೈಕಮಾಂಡ್‌ಗೆ ನೀಡಿದ್ದು, ಆ ಬಗ್ಗೆ ದಾಖಲಾಗಿರುವ ಡೈರಿ ಪ್ರಕರಣವನ್ನು ತನಿಖೆಗೆ ಮಾಡಬೇಕು ಎಂದು ಆಗ್ರಹಿಸಿದರು.
-vishwani

loading...

No comments