Breaking News

ಪಿನರಾಯಿ ವಿಜಯನ್ ಮಂಗಳೂರು ಭೇಟಿಗೆ ವಿರೋಧ, ಸಿಪಿಐಎಂ ಕಛೇರಿಗೆ ಬೆಂಕಿ.

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಫೆಬ್ರವರಿ 25ರಂದು ನಡೆಯಲಿರುವ ಸೌಹಾರ್ದ ಸಮಾವೇಶಕ್ಕೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಾಲ್ಗೊಳ್ಳುತ್ತಿರುದಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮಂಗಳೂರಿನ ತೊಕ್ಕೊಟ್ಟುವಿನಲ್ಲಿರುವ ಸಿಪಿಎಂ ಕಛೇರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಸಿಪಿಎಂ ಕಛೇರಿಯ ಬೀಗ ಒಡೆದು ಒಳನುಗ್ಗಿದ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಒಳಗಿದ್ದ ಬ್ಯಾನರ್, ಪ್ಲೆಕ್ಸ್ ,ಟಿವಿ, ಕಪಾಟಿನಲ್ಲಿದ್ದ ಪಕ್ಷದ ಕಡತಗಳು, ಪೀಠೋಪಕರಣಗಳು ಹಾಗೂ ಇನ್ನಿತರ ವಸ್ತುಗಳು ಬೆಂಕಿಗಾಹುತಿಯಾಗಿದೆ.
ಗುರುವಾರ ಕಛೇರಿಗೆ ಪತ್ರಿಕೆ ಹಾಕಲು ಬಂದ ವ್ಯಕ್ತಿ ಈ ಕೃತ್ಯವನ್ನು ಗಮನಿಸಿದ್ದು ತಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾನೆ. ಪೋಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಸಿಪಿಎಂ ಮುಖಂಡರು ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಪೋಲೀಸರಲ್ಲಿ ಆಗ್ರಹಿಸಿದ್ದಾರೆ.
ಕರಾವಳಿ ಹಿಂದೂ ಸಂಘಟನೆಗಳ ವಿರೋಧದ ನಡುವೆಯೂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಾಲ್ಗೊಳ್ಳುತ್ತಿದ್ದು. ಇದನ್ನು ವಿರೋಧಿಸಿ ಫೆಬ್ರವರಿ 25ರಂದು ಹಿಂದೂ ಸಂಘಟನೆಗಳು ದಕ್ಷಿಣಕನ್ನಡ ಬಂದ್ ಗೆ ಕರೆ ನೀಡಿದೆ. 
loading...

No comments