ಅಮೇರಿಕಾ : ಮಾಧ್ಯಮಗಳ ವಿರುದ್ದದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಮಾಧ್ಯಮಗಳೇ ಅಮೆರಿಕ ಪ್ರಜೆಗಳ ಬದ್ಧ ವೈರಿಗಳಾಗಿವೆ ಎಂದು ಬಣ್ಣಿಸಿದ್ದಾರೆ. ಕೆಲವು ಟಿವಿ ವಾಹನಿಗಳು ಮತ್ತು ಪತ್ರಿಕೆಗಳ ಹೆಸರುಗಳನ್ನು ಉಲ್ಲೇಖಿಸಿ ಮಾತನಾಡಿರುವ ಟ್ರಂಪ್, ಇವು ನನ್ನ ಶತ್ರುಗಳಲ್ಲ. ಆದರೆ ಅಮೆರಿಕ ಜನತೆಯ ಶತ್ರುಗಳು ಎಂದು ಹೇಳಿದ್ದಾರೆ. ನನ್ನ ಅಧ್ಯಕ್ಷತೆಯಲ್ಲಿ ಆಡಳಿತ ಯಂತ್ರ ಅತ್ಯಂತ ಸುಗಮವಾಗಿ ನಡೆಯುತ್ತಿದೆ. ಯಾವುದೇ ಗೊಂದಲಗಳು, ಪ್ರತಿರೋಧಗಳು, ವಿರೋಧಬಾಸಗಳು ಇಲ್ಲ. ಶ್ವೇತಭವನದಲ್ಲಿ ಎಲ್ಲವೂ ಸಹಜವಾಗಿಯೇ ಇದೆ. ಆದರೆ ಈ ಮಾಧ್ಯಮಗಳು ವ್ಯತಿರಿಕ್ತ ರೀತಿಯಲ್ಲಿ ಬಿಂಬಿಸುತ್ತವೆ ಎಂದು ಕಿಡಿಕಾರಿದ್ದಾರೆ.
ani
loading...
No comments