ಇಸ್ಲಾಂ ಮೂಲಭೂತವಾದಿಗಳ ಬೆದರಿಕೆಗೆ ಜಗ್ಗದ ಮುಸ್ಲಿಂ ಹುಡುಗಿ
ಬೆಂಗಳೂರು : ಬೆಂಗಳೂರಿನಲ್ಲಿ ಕಾನೂನು ವಿದ್ಯಾಭ್ಯಾಸ ಮಾಡುತ್ತಿರುವ ಕೇರಳ ಮೂಲದ ಮುಸಲ್ಮಾನ ವಿದ್ಯಾರ್ಥಿನಿಯೋರ್ವಳಿಗೆ ಇಸ್ಲಾಂ ಮೂಲಭೂತವಾದಿಗಳು ಬೆದರಿಕೆ ಹಾಕುತ್ತಿರುವ ಬಗ್ಗೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳದ ಕೋಜಿಕೋಡೆ ಜಿಲ್ಲೆಯ ನದಾಪುರಂ ನಿವಾಸಿಯಾದ ಅಜಿನ್ಯಾ ಅಸ್ಮೀನ್ ಇಸ್ಲಾಂ ಮೂಲಭೂತವಾದಿಗಳಿಂದ ತೊಂದರೆಗೊಳಗಾಗುತ್ತಿರುವ ವಿದ್ಯಾರ್ಥಿನಿ. ಬೆಂಗಳೂರಿನ ಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಈಕೆಗೆ MSF, IUML ಇಸ್ಲಾಮಿಕ್ ಸಂಘಟನೆ ಕಾರ್ಯಕರ್ತರಿಂದ ಬೆದರಿಕೆ ಕರೆಗಳು ಬರುತ್ತಿದೆಯಂತೆ.
ಮುಸ್ಲಿಂ ಧರ್ಮೀಯಳಾಗಿರುವ ಅಜಿನ್ಯಾ ಬೇರೆ ಮುಸಲ್ಮಾನ ಮಹಿಳೆಯರಂತೆ ಬುರ್ಕಾ ಧರಿಸುವುದಿಲ್ಲ, ಹಣೆಗೆ ಬಿಂದಿ ಇಟ್ಟುಕೊಳ್ಳುತ್ತಾಳೆ ಹಾಗೂ ಅನ್ಯ ಧರ್ಮದ ಹುಡುಗರೊಂದಿಗೆ ಸುತ್ತಾಡುತ್ತಾಳೆ ಎಂಬ ಕಾರಣಕ್ಕೆ MSF, IUML ಇಸ್ಲಾಮಿಕ್ ಸಂಘಟನೆಗಳ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರುದ್ಧ ಅಸಭ್ಯ, ಮಾನಹಾನಿ ಮಾಡುವಂತಹ ಸಂದೇಶಗಳನ್ನು ಹರಡುತ್ತಿದ್ದು ಬೆದರಿಕೆಯನ್ನೂ ಒಡ್ಡುತ್ತಿದ್ದಾರೆ ಎಂದು ಅಜಿನ್ಯ ತಮ್ಮ ಊರಾದ ಕೇರಳದ ನದಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
loading...
No comments