ತಮಿಳುನಾಡು ಶಾಸಕರಿಗೆ ಛಿಮಾರಿ ಹಾಕಿದ : ಕಮಲ್ ಹಾಸನ್
ಚೆನ್ನೈ: ತಮಿಳುನಾಡು ಸದನದಲ್ಲಿ ನಡೆದ ಕೋಲಾಹಲದ ಬಳಿಕ 122 ಶಾಸಕರ ಬೆಂಬಲದ ಮೇರೆಗೆ ಮುಖ್ಯಮಂತ್ರಿ ಪಟ್ಟ ಅಲಂಕರಿಸಿರುವ ಇಡಪ್ಪಡಿ ಕೆ ಪಳನಿಸ್ವಾಮಿ ವಿರುದ್ಧ ತಮಿಳು ಚಿತ್ರರಂಗದ ಕೆಲ ನಟರು ಗುಡುಗಿದ್ದಾರೆ.
ಶುಕ್ರವಾರದಂದು ರಾಜ್ಯದ ರಾಜಕೀಯ ಬೆಳವಣಿಗೆ ಕುರಿತು ಗುಡುಗಿದ್ದ ಕಮಲ್ ಹಾಸನ್ ಇಂದೂ ಸಹ ಟ್ವೀಟ್ ಮಾಡಿದ್ದು, 'ಇಂದು ಮತ ಚಲಾಯಿಸಿ ಹಿಂತಿರುಗುವ ಪ್ರತಿಯೊಬ್ಬ ಶಾಸಕರಿಗೂ ಅವರ ಗುಣಕ್ಕೆ ತಕ್ಕಂತೆ ಮರ್ಯಾದೆ ನೀಡಿ ಸ್ವಾಗತಿಸಬೇಕು ಎಂದು ವ್ಯಂಗ್ಯ ದಾಟಿಯಲ್ಲೇ ಟ್ವೀಟ್ ಮಾಡಿದ್ದಾರೆ.
ಇದರ ಜತೆಯಲ್ಲಿಯೇ ತಮಿಳುನಾಡಿನ ರಾಜ್ಯಪಾಲರ ಇ-ಮೇಲ್ ಐಡಿಯನ್ನೂ ಸಹ ಕಮಲ್ ಹಾಸನ್ ಟ್ವೀಟ್ ಮಾಡಿದ್ದು ಏನಾದರು ತೊಂದರೆಯುಂಟಾದರೆ ಕೂಡಲೇ rajbhavantamilnadu@gmail.comಗೆ ಟ್ವೀಟ್ ಮಾಡಿ ಎಂದು ಹೇಳಿದ್ದಾರೆ.
loading...
No comments