Breaking News

ಕಾಶ್ಮೀರ ಕಣಿವೆ ಶ್ರೇಷ್ಠ ಪಂಡಿತ ಗುರುಗಳನ್ನು ಕಳೆದುಕೊಂಡು ಗುಣಮಟ್ಟದ ಶಿಕ್ಷಣದಿಂದ ವಂಚಿತವಾಗಿದೆ - ಮುಪ್ತಿ

ಜಮ್ಮು-ಕಾಶ್ಮೀರ : 1990ರಲ್ಲಿ ಭಯೋತ್ಪಾದಕರ ಧಾಳಿಯಿಂದಾಗಿ ಕಾಶ್ಮೀರಿ ಪಂಡಿತರು ಕಾಶ್ಮೀರ ತೊರೆದು ಹೋಗಿದ್ದೇ ಇಂದು ಕಾಶ್ಮೀರದಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯಲು ಕಾರಣ ಎಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಮೆಹಬೂಬ ಮುಫ್ತಿ " ಅಂದು ಪಂಡಿತರು ಭಯೋತ್ಪಾದಕರ ದಾಳಿಗೆ ಒಳಗಾಗಿ ಕಾಶ್ಮೀರ ಕಣೆವೆಯನ್ನು ತೊರೆದರು ಅದರ ಪರಿಣಾಮ ಕಾಶ್ಮೀರ ಅನುಭವಿಸುತ್ತಿದೆ, ಕಾಶ್ಮೀರಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಜಮ್ಮು ಕಾಶ್ಮೀರ ಅಭಿವೃದ್ಧಿಯಾಗಬೇಕಾದರೆ ಶಾಂತಿಯ ಅಗತ್ಯವಿದ್ದು ಇದನ್ನು ಕಾಶ್ಮೀರಿ ಕಣಿವೆಯ ಜನತೆ ಅರ್ಥ ಮಾಡಿಕೊಳ್ಳಬೇಕು" ಎಂದು ಹೇಳಿದ್ದಾರೆ.
ಕಾಶ್ಮೀರಿ ಪಂಡಿತರು ಶ್ರೇಷ್ಠ ಗುರುಗಳಾಗಿದ್ದರು, ತಮ್ಮಲ್ಲಿದ್ದ ಅಪಾರ ಜ್ಞಾನವನ್ನು ಜಮ್ಮು ಕಾಶ್ಮೀರದ ಜನತೆಗೆ ಕಲಿಸುತ್ತಿದ್ದರು. ಆದರೆ ಭಯೋತ್ಪಾದಕ ಕೃತ್ಯದಿಂದಾಗಿ ಪಂಡಿತರು ಕಾಶ್ಮೀರ ತೊರೆದರು, ಕಾಶ್ಮೀರ ಕಣಿವೆ ಶ್ರೇಷ್ಠ ಗುರುಗಳನ್ನು ಕಳೆದುಕೊಂಡು ಗುಣಮಟ್ಟದ ಶಿಕ್ಷಣದಿಂದ ವಂಚಿತವಾಗಿದೆ ಎಂದು ಮೆಹಬೂಬ ಮುಫ್ತಿ ತಮ್ಮ ಬೇಸರ ವ್ಯಕ್ತ ಪಡಿಸಿದರು.
ಮಾತು ಮುಂದುವರೆಸಿದ ಮುಫ್ತಿ "ನಾನೂ ಸಹ ಪಂಡಿತ ಗುರುಗಳಿಂದಲೇ ವಿದ್ಯಾಭ್ಯಾಸ ಕಲಿತವಳು. ಆದ್ದರಿಂದ ಹೇಳುತ್ತಿದ್ದೇನೆ, ಪಂಡಿತರು ನಿಜವಾಗಿಯೂ ಶ್ರೇಷ್ಠ ಗುರುಗಳು. ಕಾಶ್ಮೀರದ ಅನೇಕ ಪ್ರಸಿದ್ಧರು ಇದೇ ಪಂಡಿತರಿಂದಲೇ ಜ್ಞಾನ ಸಂಪಾದಿಸಿದವರು. ಕಾಶ್ಮೀರವನ್ನು ಮತ್ತೆ ಅದೇ ಹಿಂದಿನ ಗತವೈಭವಕ್ಕೆ ಮರಳಿಸುವುದು ಸವಾಲಿನ ಕೆಲಸವಾಗಿದೆ" ಎಂದು ಹೇಳಿದರು.
loading...

No comments