Breaking News

ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ನಿವೃತ್ತ ಸೈನಿಕನಿಂದ ದೇಶದುದ್ದಕ್ಕೂ ಸೈಕಲ್ ಪ್ರಯಾಣ



ಅಂಕೋಲಾ : ಸೈಕಲ್ ಮೂಲಕ ದೇಶದುದ್ದಕ್ಕೂ ಪ್ರಯಾಣ ಮಾಡಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸುತ್ತಿರುವ ನಿವೃತ್ತ ಯೋಧನೊಬ್ಬ ಮೇಜರ್ ಜನರಲ್ ಸೋಮನಾಥ ಝಾ ಅವರೇ ಸೈಕಲ್ ಮೂಲಕ ದೇಶ ಸುತ್ತಲು ಹೊರಟವರು. ಇವರು 37 ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿ 2016ರ ಸೆಪ್ಟೆಂಬರ್ 30ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ಸೇವೆಯಲ್ಲಿ ಇದ್ದ ಸಂದರ್ಭದಲ್ಲಿ ಅನೇಕ ಸೈನಿಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಇವರ ಸಹೋದ್ಯೋಗಿಗಳು ಹಲವಾರು ಜನ ಹುತಾತ್ಮರಾಗಿದ್ದಾರೆ. ಇದು ಸೋಮನಾಥರ ಮನ ಕಲುಕಿದೆ. ಹೀಗಾಗಿ ನಿವೃತ್ತಿಯ ನಂತರದಲ್ಲಿ ತಾವು ಕೊನೆಯದಾಗಿ ಸೇವೆ ಸಲ್ಲಿಸುತ್ತಿದ್ದ ಹರಿಯಾಣಾದ ಅಂಬಾಲಾ ಕ್ಯಾಂಟಿನಿಂದ ಅಕ್ಟೋಬರ್ 19ರಿಂದ ಸೈಕಲ್ ಮೇಲೆ ಪಯಣ ಆರಂಭ ಮಾಡಿದ್ದಾರೆ.

ದೇಶಕ್ಕಾಗಿ ಸುಮಾರು 21,000 ಯೋಧರು ಇದುವರೆಗೂ ಹುತಾತ್ಮರಾಗಿದ್ದು, ಪ್ರತಿ ಯೋಧನ ಸ್ಮರಣೆಯಲ್ಲಿ 2 ನಿಮಿಷದಂತೆ ಒಟ್ಟಾರೆ 42,000 ನಿಮಿಷ ಸೈಕಲ್ ಓಡಿಸಲು ಸಂಕಲ್ಪ ಮಾಡಿರುವ ಇವರು ಈಗಾಗಲೇ ಅವರು 6,300 ಕಿ ಮೀ ಪಯಣಿಸಿದ್ದಾರೆ. ಕರ್ನಾಟಕ ಸೇರಿ 20 ರಾಜ್ಯಗಳನ್ನು ತಿರುಗಿದ್ದಾರೆ. ಬರುವ ಏಪ್ರಿಲ್ ಅಂತ್ಯದಲ್ಲಿ ದೆಹಲಿಯ ಇಂಡಿಯಾ ಗೇಟಿನ ಅಮರ್ ಜವಾನ್ ಜ್ಯೋತಿ ಬಳಿ ತಲುಪಿ ತಮ್ಮ ಸೈಕಲ್ ಯಾತ್ರೆಗೆ ಅಂತ್ಯ ಹಾಡಲಿದ್ದಾರೆ.
loading...

No comments