ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ ಸಿಸಿ ಟಿವಿಯಲ್ಲಿ ಸೆರೆ
ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಥಾಣೆಯ ಭೀವಂಡಿಯಲ್ಲಿ ಮನೋಜ್ ಮಹತ್ರೆ ಎಂಬುವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಹತ್ಯೆಯಾದ ಮನೋಜ್ ಭಿವಾಂಡಿ-ನಿಜಾಮ್‌ಪುರ್ ಪುರಸಭೆಯ ಕಾಂಗ್ರೆಸ್ ಮುಖಂಡ. ಭದ್ರತೆ ಕಾರಣಗಳಿಂದಾಗಿಯೇ ಭಿವಂಡಿ ತಾಲೂಕಿನ ಕಲ್ವಾ ಪ್ರದೇಶವನ್ನು ಮನೋಜ್ ತೊರೆದಿದ್ದರು. ನಂತರ ಭೀವಂಡಿ ನಗರದ ಓಸ್ವಾಲ್ ವಾಡಿಗೆ ವಾಸ್ತವ್ಯ ಬದಲಾಯಿಸಿದ್ದರು.
ಆದರೆ, ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಮೊದಲು ಮನೋಜ್ ಬೆನ್ನಿಗೆ ಗುಂಡು ಹಾರಿಸಿದ್ದಾರೆ. ನಂತರ ಮನೋಜ್ ಕೆಳಗೆ ಬಿದ್ದಿದ್ದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
loading...
No comments