Breaking News

ಯಾರೇ ಕರೆ ಮಾಡಿದರೂ ಸ್ವೀಕರಿಸುವೆ : ಗೋವಾ ಸಿಎಂ ಪರ್ಸೇಕರ್‌



ಮಹದಾಯಿ ವಿವಾದ ಸಿದ್ದರಾಮಯ್ಯ ನವರಿಗೆ ಟಾಂಗ್ ನೀಡಿದ ಪರ್ಸೇಕರ್‌

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಅವರಷ್ಟೇ ಅಲ್ಲ. ಜನಸಾಮಾನ್ಯರನ್ನು ಒಳಗೊಂಡಂತೆ ಯಾರೇ ಫೋನ್‌ ಕರೆ ಮಾಡಿದರೂ ಸ್ವೀಕರಿಸುತ್ತೇನೆ!

ಇದು ಗೋವಾ ಸಿಎಂ ಲಕ್ಷ್ಮೇಕಾಂತ್‌ ಪರ್ಸೇಕರ್‌ ಅವರ ಸ್ಪಷ್ಟ ನುಡಿ. ಏರೋ ಇಂಡಿಯಾ ನೇಪಥ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಅತ್ಯಂತ ಸುಲಭವಾಗಿ ದೂರವಾಣಿ ಸಂಪರ್ಕಕ್ಕೆ ಸಿಗುವ ಮುಖ್ಯಮಂತ್ರಿ ದೇಶದಲ್ಲಿ ಯಾರಾದರೂ ಇದ್ದರೆ ಅದು ನಾನೇ,' ಎಂದು ಹೇಳಿಕೊಂಡರು.

ಮಹದಾಯಿ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥ ಮಾಡಿಕೊಳ್ಳುವ ಕಾಳಜಿಯಿಂದ ಪರ್ಸೇಕರ್‌ ಅವರಿಗೆ ಕರೆ ಮಾಡಿದ್ದರೂ ಅವರು ಸಿಗಲಿಲ್ಲವೆಂದು ರಾಜ್ಯದ ಸಿಎಂ ಸಿದ್ದರಾಮಯ್ಯ ಹಲವಾರು ಬಾರಿ ಹೇಳಿಕೆ ಕೊಟ್ಟದ್ದರು. ಈ ಬಗ್ಗೆ ಗೋವಾ ಸಿಎಂ ಗಮನ ಸೆಳೆದಾಗ, 'ಹಾಗೇನೂ ಇಲ್ಲ. ನಾನು ಅವರ ನಿರಂತರ ಸಂಪರ್ಕದಲ್ಲೇ ಇದ್ದೇನೆ. ಕರೆ ಮಾಡಿದರೆ ಸ್ವೀಕರಿಸದೇ ಇರುವ ಸ್ವಭಾವ ನನ್ನದಲ್ಲ. ಜನಸಾಮಾನ್ಯರು ಕೂಡ ನನಗೆ ಕರೆ ಮಾಡುತ್ತಾರೆ. ಬೇಕಿದ್ದರೆ ನೀವು ಕರೆ ಮಾಡಿ ನೋಡಿ,' ಎಂದು ಹೇಳಿದರು.

ಸಂಧಾನಕ್ಕೆ ವಿರೋಧ

ಆದರೆ, ಮಹದಾಯಿ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥ ಪಡಿಸುವ ಪ್ರಸ್ತಾವಕ್ಕೆ ಪರ್ಸೇಕರ್‌ ಪರೋಕ್ಷ ವಿರೋಧ ವ್ಯಕ್ತಪಡಿಸಿದರು. 'ಈ ವಿಚಾರ ನ್ಯಾಯಾಧಿಕರಣದ ಮುಂದೆ ಇದೆ. ನ್ಯಾಯಾಧಿಕರಣದವರು ಮೂರು ರಾಜ್ಯಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅವರೇ ತೀರ್ಪು ಕೊಡುವುದು ಉತ್ತಮ. ಯಾಕೆಂದರೆ, ನಾವ್ಯಾರೂ ತಜ್ಞರಲ್ಲ. ಕುಡಿಯುವ ನೀರಿಗೆ ಆದ್ಯತೆ ಕೊಡಬೇಕು ಎನ್ನುವುದನ್ನು ಒಪ್ಪುತ್ತೇನೆ,' ಎಂದರು.

loading...

No comments