ಕರೆಂಟ್ ವೈರ್ ಹಿಡಿದು ರೈತ ಆತ್ಮಹತ್ಯೆ
ಸಿಂಧನೂರು: ಸಾಲಬಾಧೆ ತಾಳಲಾರದೆ ಕರೆಂಟ್ ವೈರ್ ಹಿಡಿದು ರೈತ ಆತ್ಮಹತ್ಯೆಗೆ ಶರಣಾದ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ಚಿತ್ರಾಲಿ ಗ್ರಾಮದಲ್ಲಿ ನಡೆದಿದೆ.
ಸಿದ್ದಯ್ಯಸ್ವಾಮಿ (45) ಆತ್ಮಹತ್ಯೆ ಮಾಡಿಕೊಂಡ ರೈತ. ಕುಡಿಯುವ ನೀರು ಪೂರೈಕೆ ಮಾಡುವ ಮೋಟಾರ್ ವೈರ್ ಹಿಡಿದು ರೈತ ಸಿದ್ದಯ್ಯಸ್ವಾಮಿ ಪ್ರಾಣ ಬಿಟ್ಟಿದ್ದಾರೆ.
9 ಎಕರೆ ಸ್ವಂತ ಹೊಲ ಹೊಂದಿದ್ದ ಸಿದ್ದಯ್ಯ, ಜವಳಗೇರಾ ಸಿಂಡಿಕೇಟ್ ಬ್ಯಾಂಕ್‌ನಲ್ಲಿ 8 ಲಕ್ಷ ರೂ., 8 ಲಕ್ಷ ರೂ. ಕೈ ಸಾಲ ಪಡೆದಿದ್ದರು. ಆತ್ಮಹತ್ಯೆ ಸಂಬಂಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
loading...
No comments