Breaking News

ಹಿಂದೂ ಜಾಗರಣೆ ವೇದಿಕೆ ಕಾರ್ಯಕರ್ತನ ಬರ್ಬರ ಹತ್ಯೆ


ಮಂಗಳೂರು : ಮಂಗಳೂರಿನ ಮರೋಳಿಯಲ್ಲಿ ಭಾನುವಾರ ನಸುಕಿನ ಜಾವ ಹಿಂದೂ ಜಾಗರಣೆ ವೇದಿಕೆ ಕಾರ್ಯಕರ್ತನನ್ನು ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆಯಾದ ಯುವಕನನ್ನು ಮರೋಳಿಯ ನಿಡ್ಡೆಲ್ ನಿವಾಸಿ ಪ್ರತಾಪ್(25) ಎಂದು ಗುರುತಿಸಲಾಗಿದ್ದು, ಆತನ ಜೊತೆಗಿದ್ದ ಮಣಿಕಂಠ ದುಷ್ಕರ್ಮಿಗಳ ಧಾಳಿಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಪ್ರತಾಪ್ ಮತ್ತು ಮಣಿಕಂಠ ಇಬ್ಬರೂ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರಾಗಿದ್ದು ಭಾನುವಾರ ಬೆಳಗ್ಗಿನ ಜಾವ ಮನೆ ಮುಂದೆ ನಿಂತಿದ್ದಾಗ ಎಂಟರಿಂದ ಹತ್ತು ಜನರ ತಂಡ ಇಬ್ಬರ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಧಾಳಿ ಮಾಡಿದ್ದಾರೆ. ಗಂಭೀರ ಗಾಯಗೊಂಡ ಪ್ರತಾಪ್ ಸ್ಥಳದಲ್ಲಿಯೇ ಕೊನೆಯುಸಿರೆಳೆದರೆ ಮಣಿಕಂಠ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾನೆ. ಸದ್ಯ ಕೈಗೆ ಗಂಭೀರವಾಗಿ ಗಾಯಗೊಂಡಿರುವ ಮಣಿಕಂಠನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಬಂದಿತರನ್ನು ವಿನೇಶ್, ಮಿಥುನ್, ಕೌಶಿ ಮತ್ತು ನೀಶು ಎಂದು ಗುರುತಿಸಲಾಗಿದ್ದು, ಬಂಧಿತರಲ್ಲಿ ಒಬ್ಬನ ಮನೆಯಿಂದ ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಕಂಕನಾಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...

No comments