Breaking News

ನಿಮ್ಮನ್ನು ಯಾವ ದೇವರೂ ಕ್ಷಮಿಸಲ್ಲ. ಐವನ್ ವಿರುದ್ಧ ಕೆಂಡ ಕಾರಿದ ಪೂಜಾರಿ .

ಮಂಗಳೂರು : ರಾಜಕೀಯ ಕುತಂತ್ರವನ್ನು ನಡೆಸುತ್ತಿರುವ ರಾಜ್ಯ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ತಮ್ಮ ರಾಜಕೀಯ ಬದುಕಿನಲ್ಲಿ ತಪ್ಪು ಹಾದಿಯಲ್ಲಿ ಹೋಗುತ್ತಿದ್ದಾರೆ. ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಬರುತ್ತಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಹಾದಿ ತಪ್ಪಿಸಿ ಬಾರದಂತೆ ಮಾಡಿದ್ದಾರೆ ಎಂದು ಜನಾರ್ದನ ಪೂಜಾರಿ ಬಹಿರಂಗವಾಗಿ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ಐವನ್ನರಿಗೆ ತನ್ನ ರಾಜಕೀಯ ಬದುಕಿನಲ್ಲಿ ಎಂದಿಗೂ ಒಳಿತಾಗಲ್ಲ. ನೀವು ಮಾಡಿದ ಅನ್ಯಾಯವನ್ನು ದೇವರು ಎಂದಿಗೂ ಕ್ಷಮಿಸಲ್ಲ. ಕುದ್ರೋಳಿ ಗೋಕರ್ಣನಾಥ, ಮಸೀದಿಯಲ್ಲಿರುವ ಅಲ್ಲಾ, ನೀವು ನಂಬಿದ ಏಸು ಕ್ರಿಸ್ತನೂ ನಿಮಗೆ ಒಳಿತು ಮಾಡಲ್ಲ. ದೇವಸ್ಥಾನಕ್ಕೆ ಬರುವವರನ್ನು ಪಿತೂರಿಯಿಂದ ಕರೆದುಕೊಂಡು ಹೋಗಿ ನೀವು ಸಾಧಿಸಬೇಕಾದ ಕೆಲಸವೂ ಎಂದೂ ಪೂರ್ಣವಾಗದು” ಎಂದು ಐವನ್ ಉದ್ದೇಶಿಸಿ ಜನಾರ್ದನ ಪೂಜಾರಿ ಕೆಂಡ ಕಾರಿದ್ದಾರೆ.
loading...

No comments