Breaking News

ಕೇರಳ ಮುಖ್ಯಮಂತ್ರಿ ಮಂಗಳೂರು ಭೇಟಿ ವಿರೋಧ, ಕೇಸರಿ ಪಡೆಯಿಂದ ಶಕ್ತಿ ಪ್ರದರ್ಶನ.

​​ಮಂಗಳೂರು : ಸಿಪಿಐಎಮ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕರಾವಳಿ ಜಿಲ್ಲೆಗಳ ಐಕ್ಯತೆ ಹಾಗೂ ಶಾಂತಿಯನ್ನು ಭದ್ರಪಡಿಸಲು ಫೆ 25ರಂದು ನಗರದಲ್ಲಿ ನಡೆಸಲಿರುವ ಕರಾವಳಿ ಸೌಹಾರ್ದ ರ್ಯಾಲಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮನ ವಿರೋಧಿಸಿ ಕರಾವಳಿ ಹಿಂದೂ ಸಂಘಟನೆಗಳು ಶುಕ್ರವಾರ (ಇಂದು) ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಹಿಂದೂ ಪರಿಷತ್ ಮತ್ತು ಹಿಂದೂ ಜಾಗರಣ ವೇದಿಕೆ ಸಂಘಟನೆಗಳು ಪಿಣರಾಯಿ ವಿಜಯನಗರ ಆಗಮನ ವಿರೋಧಿಸಿ ಶನಿವಾರ ಬಂದ್ ಗೆ ಕರೆ ನೀಡಿದ್ದು .ಈ ಬಂದ್ ಗೆ ದಕ್ಷಿಣ ಕನ್ನಡ ಬಿಜೆಪಿ ಘಟಕ ತನ್ನ ಸಂಪೂರ್ಣ ನೀಡಿದೆ. 
ಶನಿವಾರ ಕರೆಕೊಟ್ಟಿರುವ ಬಂದ್ ಗೆ ಪೂರ್ವಬಾವಿಯಾಗಿ ಇಂದು ಕರಾವಳಿ ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಡಾ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ರ್ಯಾಲಿ ಮಾಡಲಾಗುತ್ತಿದೆ. ಶೋಭಾ ಕರಂದ್ಲಾಜೆ ಸೇರಿದಂತೆ ಕರಾವಳಿಯ ಪ್ರಮುಖ ಬಿಜೆಪಿ ಮುಖಂಡರು, ಹಿಂದೂ ಸಂಘಟನೆ ಮುಖಂಡರು, ಕಾರ್ಯಕರ್ತರು ಸೇರಿದಂತೆ ಹತ್ತುಸಾವಿರಕ್ಕೂ ಅಧಿಕ ಜನ ಸಂಘಪರಿವಾರ ನಡೆಸುತ್ತಿರುವ ಪ್ರತಿಭಟನಾ ರ್ಯಾಲಿಗೆ ಕೈಜೋಡಿಸಿದ್ದು, ಎಲ್ಲಿ ನೋಡಿದರು ಕೇಸರಿ ಧ್ವಜಗಳು ಹಾರಾಡುತ್ತಿವೆ.




ಪಿಣರಾಯಿ ವಿಜಯನ್‌ಗೆ ಸೂಕ್ತ ಭದ್ರತೆ: ಸಿಪಿಎಂ ಹಮ್ಮಿಕೊಂಡಿರುವ ಸೌಹಾರ್ದ ರ‍್ಯಾಲಿಗೆ ವಿರೋಧ ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ ಎಂದಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌, ರ‍್ಯಾಲಿಯಲ್ಲಿ ಭಾಗವಹಿಸಲಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
loading...

No comments